Mysore
20
clear sky

Social Media

ಭಾನುವಾರ, 08 ಫೆಬ್ರವರಿ 2026
Light
Dark

ಶಿಕ್ಷಕರು ಮರಿತಿಬ್ಬೇಗೌಡರನ್ನು ಆಯ್ಕೆ ಮಾಡಿ: ದರ್ಶನ್‌ ಮನವಿ

ನಂಜನಗೂಡು:  ಶಿಕ್ಷಣ ಕ್ಷೇತ್ರದ ಆಗು ಹೋಗುಗಳನ್ನು ಅರಿತಿರುವ ಮರಿತಿಬ್ಬೇಗೌಡರನ್ನು ಆಯ್ಕೆ ಮಾಡಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಮನವಿ ಮಾಡಿದರು.

ಅವರು ಇಂದು(ಮೇ.೩೧) ನಂಜನಗೂಡು ತಾಲೂಕಿನ ವಿವಿಧ ಗ್ರಾಮಗಳ ಶಾಲಾ, ಕಾಲೇಜುಗಳಿಗೆ ತೆರಳಿ ಮರಿತಿಬ್ಬೇಗೌಡರ ಪರವಾಗಿ ಮತಯಾಚಿಸಿ ಮಾತನಾಡಿದರು.

ಮರಿತಿಬ್ಬೇಗೌಡ ಅವರು ಕಾಂಗ್ರೆಸ್‌ ಪಕ್ಷದಿಂದ ಶಿಕ್ಷಕರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾರೆ. ಶಿಕ್ಷಕರ ಕಷ್ಟ ಕರ್ಪಣ್ಯಗಳಿಗೆ ಆಗಿದ್ದಾರೆ. ಅವರು ಈಗಾಗಲೇ ನಾಲ್ಕು ಬಾರಿ ಆಯ್ಕೆ ಆಗಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಅದು ನಿಮಗೂ ತಿಳಿದಿದೆ. ಆಗಾಗಿ ಪ್ರಬುದ್ಧ ಮತದಾರರು ಮರಿತಿಬ್ಬೇಗೌಡರನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು.

ತಾಲ್ಲೂಕಿನ ಹೆಗ್ಗಡಹಳ್ಳಿ, ಹುಲ್ಲಹಳ್ಳಿ, ಹುರ, ಹೆಡಿಯಾಲ ಮುಂತಾದ ಗ್ರಾಮಗಳ ಶಾಲಾ, ಕಾಲೇಜುಗಳಿಗೆ ತೆರಳಿ ಮಾತಯಾಚಿಸಿದರು.

Tags:
error: Content is protected !!