Mysore
27
scattered clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ಮಹಾರಾಜ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ: ಡಾ.ಎಸ್‌ ರಾಧಾಕೃಷ್ಣನ್‌ರವರ ಸ್ಮರಣೆ

ಮೈಸೂರು: ಇಲ್ಲಿನ ಮಹಾರಾಜ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಕಾಲೇಜಿನ ಸಿಬ್ಬಂದಿಯವರಿಂದ ಅರ್ಥಪೂರ್ಣವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೇವರಾಜ ಗೌಡ ಸರ್ವಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ಮಾತನಾಡಿದ ಅವರು, ಸರ್ವಪಲ್ಲಿ ರಾಧಾಕೃಷ್ಣರವರು, ಮಹಾರಾಜ ಕಾಲೇಜಿನಲ್ಲೇ ಪ್ರಾಧ್ಯಾಪಕರಾಗಿದ್ದುಕೊಂಡು, ಇದೇ ಕಾಲೇಜಿನಲ್ಲಿ ಉತ್ತಮ ಶಿಕ್ಷಕರಾಗಿ ದೇಶದ ಉಪರಾಷ್ಟ್ರಪತಿ ಹಾಗೂ ರಾಷ್ಟ್ರಪತಿಯಾದರು. ಶಿಕ್ಷಕ ಕ್ಷೇತ್ರದಲ್ಲಿ ಅವರ ಗಣನೀಯ ಸೇವೆ ಗುರುತಿಸಿ ಅವರ ಜನ್ಮದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಘೋಷಿಸಲಾಯಿತು ಎಂದರು.

ಭಾರತದ ರಾಷ್ಟ್ರಪತಿಯಾಗಿದ್ದ ರಾಧಾಕೃಷ್ಣ ರವರ, ಶಿಕ್ಷಣ ವೈಖರಿ, ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ, ಮಹಾರಾಜ ಕಾಲೇಜಿನಲ್ಲಿ ಅವರು, ಬೆಳೆಸಿದ ವಿದ್ಯಾರ್ಥಿ ಬಳಗ… ಶಿಕ್ಷಕ ವೃತ್ತಿಗೆ ಅರ್ಥಪೂರ್ಣವಾದ ಬೆಳಕನ್ನು ಚೆಲ್ಲಿದ, ಸರ್ವಪಲ್ಲಿ ರಾಧಾಕೃಷ್ಣರವರನ್ನು ಸ್ಮರಿಸಿದರು.

ಆಡಳಿತ ಅಧಿಕಾರಿ ಪ್ರೊ. ವಿ. ಷಣ್ಮುಗಂ, ಪ್ರಾಧ್ಯಾಪಕರಾದ ಡಾ.ಲೋಕೆಶ್‌, ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ಯ ಕಾರ್ಯಕ್ರಮಧಿಕಾರಿಗಳಾದ ಡಾ. ಎಸ್ ಕೃಷ್ಣಪ್ಪ, ಡಾ. ಮಧುಸೂದನ್ ಪಿ.ಎಸ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

Tags:
error: Content is protected !!