ಮೈಸೂರು: ಸರ್ಕಾರದ ಆದೇಶ ಗಾಳಿಗೆ ತೂರಿ ಶಿಕ್ಷಕನೊಬ್ಬ ತನ್ನ ಹುಟ್ಟುಹಬ್ಬವನ್ನು ಶಾಲೆಯಲ್ಲಿ ಆಚರಿಸಿಕೊಂಡ ಘಟನೆ ಹುಣಸೂರಿನಲ್ಲಿ ನಡೆದಿದೆ. ಹುಟ್ಟು ಹಬ್ಬ ಆಚರಣೆ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದ್ದರೂ, ಸರ್ಕಾರ ಆದೇಶವನ್ನು ಪಕ್ಕಕ್ಕಿಟ್ಟು ಬರ್ತ್ ಡೇ ಸಲೆಬ್ರೇಷನ್ ಮಾಡಿಕೊಂಡಿದ್ದಾನೆ.
ಹುಣಸೂರು ತಾಲ್ಲೂಕು ನೆಲ್ಲೂರು ಪಾಲದ ವಾಲ್ಮೀಕಿ ಆಶ್ರಮ ಶಾಲೆಯ ಮುಖ್ಯ ಶಿಕ್ಷಕ ಚೇತನ್ ಕುಮಾರ್ ಹುಟ್ಟು ಹಬ್ಬ ಆಚರಿಸಿಕೊಂಡ ಮುಖ್ಯ ಶಿಕ್ಷಕರಾಗಿದ್ದಾರೆ.
ನಿನ್ನೆ ತರಗತಿ ನಡೆಯುವ ಕೊಠಡಿಯಲ್ಲೇ ಮಕ್ಕಳು, ಸಹ ಶಿಕ್ಷಕರ ಸಮ್ಮುಖದಲ್ಲಿ ಮುಖ್ಯ ಶಿಕ್ಷಕ ಚೇತನ್ ಕುಮಾರ್ ಹುಟ್ಟು ಹಬ್ಬ ಆಚರಿಸಿಕೊಳ್ಳುವ ಮೂಲಕ ನಿಯಮ ಉಲ್ಲಂಘಿಸಿರುವುದು ಕಂಡುಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.