Mysore
30
few clouds

Social Media

ಸೋಮವಾರ, 09 ಫೆಬ್ರವರಿ 2026
Light
Dark

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಿ ; ಜಿಟಿಡಿ ಸೂಚನೆ

 ಮೈಸೂರು: ವಿಜಯನಗರ 4ನೇ ಹಂತದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಲು ಹೂಟಗಳ್ಳಿ ನಗರಸಭೆಯ ಪೌರಾಯುಕ್ತರಾದ ಚಂದ್ರಶೇಖರ್ ಗೆ ಶಾಸಕ ಜಿ.ಟಿ.ದೇವೇಗೌಡ ಸೂಚನೆ ನೀಡಿದರು.

ವಿಜಯನಗರ 4ನೇ ಹಂತದಲ್ಲಿ ಕೊಳವೆಬಾವಿ ಕೊರೆದು ಪೈಪ್ ಲೈನ್ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಿ, ಅಧಿಕಾರಿಗಳಿಗೆ ಸೂಚಿಸಿದರು.

ವಿಜಯನಗರ 4ನೇ ಹಂತದಲ್ಲಿ ಕುಡಿಯುವ ನೀರಿನ‌ ಬಹಳಷ್ಟು ಇದೆ, ಸಮಸ್ಯೆ ಬಗೆಹರಿಸಲು ಕೊಳವೆಬಾವಿಗಳನ್ನು ಕೊರೆಯಲು ಕ್ರಮಕೈಗೊಳ್ಳಲಾಗಿದೆ, ಟ್ಯಾಂಕರ್ ಮೂಲಕ ನೀರನ್ನು ಒದಗಿಸಲು ಸೂಚಿಸಿದರು.

ನಗರಸಭೆಯಲ್ಲಿ ಕುಡಿಯುವ ನೀರಿನ ಟ್ಯಾಂಕರ್ ನ್ನು ಸಪರ್ಕವಾಗಿ ಒದಗಿಸಲು ಹೆಲ್ಪ ಲೈನ್ ತೆರೆಯಬೇಕು, ಆ ಮೂಲಕ ಕುಡಿಯುವ ನೀರಿನ ಟ್ಯಾಂಕರ್ ಗಳನ್ನು ಒದಗಿಸಬೇಕು, ಸಹಾಯವಾಣಿಯನ್ನು  ಎಲ್ಲಾ ಕಡೆ‌‌‌‌ ಪ್ರಚಾರ ಮಾಡುವಂತೆ ನಗರಸಭೆಯ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಹೂಟಗಳ್ಳಿ ನಗರಸಭೆಯ ಪೌರಾಯುಕ್ತರಾದ ಚಂದ್ರಶೇಖರ್, ಎಇಇ ಮಧು, ಎಇ ದಿಲೀಪ್ ಹಾಗೂ ವಿಜಯನಗರ 4ನೇ ಹಂತದ ನಿವಾಸಿಗಳು ಹಾಜರಿದ್ದರು

Tags:
error: Content is protected !!