ಮೈಸೂರು: ಕ್ರೀಡಾಂಗಣಕ್ಕಾಗಿ ಯಾವುದೇ ಕಾರಣಕ್ಕೂ ರೇಷ್ಮೆ ಕಾರ್ಖಾನೆಯನ್ನು ಮುಚ್ಚುವುದಿಲ್ಲ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಈ ಕುರಿತು ಮಾತನಾಡಿದ ಅವರು, ನಮ್ಮ ಕ್ಷೇತ್ರದ ಜನರೇ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ನಾವು ಯಾಕೆ ಕಾರ್ಖಾನೆ ಮುಚ್ಚುತ್ತೇವೆ.? ಸುಮ್ಮನೆ ಕೆಲವರು ಸುಳ್ಳು ಹೇಳಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಈ ವಿಚಾರವಾಗಿ ಅಧಿಕಾರಿಗಳಿಂದ ತಾಂತ್ರಿಕ ವರದಿ ಕೇಳಿದ್ದು, ಕ್ರೀಡಾಂಗಣದಿಂದ ತೊಂದರೆಯಾಗದಂತೆ ಬೇರೆ ಜಾಗ ಹುಡುಕುತ್ತೇವೆ ಎಂದು ಹೇಳಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ನಮಗೆ ಕಾರ್ಖಾನೆಯು ಮುಖ್ಯ, ಕ್ರೀಡಾಂಗಣವೂ ಮುಖ್ಯ. ಕ್ರೀಡಾಂಗಣಕ್ಕಾಗಿ ಕಾರ್ಖಾನೆಯನ್ನು ಎಂದಿಗೂ ಮುಚ್ಚುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.




