Mysore
26
scattered clouds

Social Media

ಶುಕ್ರವಾರ, 02 ಜನವರಿ 2026
Light
Dark

ಸಿಯಾಚಿನ್‌ ಯುದ್ಧಭೂಮಿಗೆ ಆಯ್ಕೆಯಾದ ಮೈಸೂರಿನ ಸುಪ್ರಿತಾ..

ಮೈಸೂರು: ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸಲು ಮೈಸೂರಿನ ವಲ್ಲಭಭಾಯಿ ನಗರದ ನಿವಾಸಿ ಸುಪ್ರಿತಾ ಸಿ.ಟಿ ಅವರು ಆಯ್ಕೆಯಾಗಿದ್ದಾರೆ.

ಸುಪ್ರಿತಾ ಪ್ರಸ್ತುತ ಭಾರತೀಯ ವಾಯುಸೇನೆಯ ಕ್ಯಾಪ್ಟನ್‌ ಆಗಿದ್ದು, ಇದೀಗ ಸಿಯಾಚಿನ್‌ ಯುದ್ಧಭೂಮಿಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಸಿಯಾಚಿನ್‌ಗೆ ಆಯ್ಕೆಯಾದ ದೇಶದ ಮೊದಲ ಮಹಿಳಾ ಯೋಧೆಯಾಗಿದ್ದಾರೆ. ಈ ಮಾಹಿತಿಯನ್ನು ಸೇನೆಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಖಚಿತಪಡಿಸಿದೆ.

ತಲಕಾಡು ಪೊಲೀಸ್‌ ಠಾಣೆಯ ಪಿಎಸ್‌ಐ ತಿರುಮಲ್ಲೇಶ್‌ ಹಾಗೂ ನಿರ್ಮಲ ದಂಪತಿ ಪುತ್ರಿಯಾದ ಸುಪ್ರಿತಾ, ಮೈಸೂರಿನ ಜೆಎಸ್‌ಎಸ್‌ ಕಾನೂನು  ಕಾಲೇಜಿನಲ್ಲಿ ಪದವಿ ಹಾಗೂ ಎನ್‌ಸಿಸಿ ಯಲ್ಲಿ ʻಸಿʼ ಸರ್ಟಿಫಿಕೇಟ್‌ ಪಡೆದಿದ್ದಾರೆ.

2021ರಲ್ಲಿ ಸೇನಾ ಪಡೆಯ ಲೆಫ್ಟಿನೆಂಟ್‌ ಆಗಿ ತರಬೇತಿ ಪಡೆದು ಭಾರತೀಯ ವಾಯುಪಡೆಗೆ ನಿಯೋಜನೆಗೊಂಡಿದ್ದರು. ಆನಂತರ 2024 ರಲ್ಲಿ ಅನಂತನಾಗ್‌, ಜಬ್ಬಾಲ್ಬರ್‌, ಲೇಹ್‌ನಲ್ಲಿ ಕರ್ತವ್ಯ ನಿರ್ವಹಣೆಯ ಬಳಿಕ ಕಠಿಣ ತರಬೇತಿಯಲ್ಲಿ ತೇರ್ಗಡೆಯಾಗಿ ಸಿಯಾಚಿನ್‌ ಯುದ್ಧಭೂಮಿಗೆ ಆಯ್ಕೆಯಾಗಿದ್ದಾರೆ.

Tags:
error: Content is protected !!