Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಯಶಸ್ವಿ ದಸರಾ: ಸುದ್ದಿ ಮಾಧ್ಯಮಗಳಿಗೆ ಜಿಲ್ಲಾಧಿಕಾರಿ ಅಭಿನಂದನೆ

ಮೈಸೂರು: ನಾಡಹಬ್ಬ ದಸರಾ ಆರಂಭವಾದ ದಿನದಿಂದ ಹಿಡಿದು ಸಂಪೂರ್ಣವಾಗಿ ಮುಗಿಯುವ ತನಕ ಪ್ರತಿನಿತ್ಯ ಕಾರ್ಯಕ್ರಮಗಳ ವಿವರ ಹಾಗೂ ಹೆಚ್ಚಿನ ಮಾಹಿತಿ  ಪ್ರಸಾರ ಮಾಡುವ ಮೂಲಕ ದಸರಾ ಯಶಸ್ವಿಗೆ ಸಹಕರಿಸಿದ ಸುದ್ದಿ ಮಾಧ್ಯಗಳಿಗೆ ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಮೈಸೂರು ದಸರಾದಲ್ಲಿ ಈ ಬಾರಿ ಅದ್ದೂರಿಯಾಗಿ ನೆರವೇರಿದ ಆಹಾರಮೇಳ, ಫಲಪುಷ್ಪ ಪ್ರದರ್ಶನ, ಯುವ ಸಂಭ್ರಮ, ಯುವ ದಸರಾ, ಚಲನಚಿತ್ರೋತ್ಸವ, ಕುಸ್ತಿ, ಯೋಗ, ಕವಿಗೋಷ್ಠಿ, ಅರಮನೆಯಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾಜ್ಯದಲ್ಲೇ ಮತ್ತು ಮೈಸೂರಿನ ದಸರಾದಲ್ಲಿ ಮೊದಲ ಬಾರಿಗೆ ನಡೆದ ಡ್ರೋಣ್ ಪ್ರದರ್ಶನ ಸೇರಿದಂತೆ ಎಲ್ಲ ಕಾರ್ಯಕ್ರಮಗಳಿಗೂ ಹೆಚ್ಚಿನ ಪ್ರಚಾರ ಮಾಡುವ ಮೂಲಕ ಎಲ್ಲ ಕಾರ್ಯಕ್ರಮಗಳಿಗೂ ಹೆಚ್ಚಿನ ಮೆರುಗು ನೀಡಿ ಕಾರ್ಯಕ್ರಮದ ಅದ್ಧೂರಿತನ ಹೆಚ್ಚಿಸಲು ಸಹಕರಿಸಿದ್ದಿರಿ. ಜೊತೆಗೆ  ಜಿಲ್ಲಾಡಳಿತವು ದಸರಾ ಸಂದರ್ಭದಲ್ಲಿ ಆಯೋಜಿಸಿದ ಪ್ರತಿಯೊಂದು ಸಭೆ, ಸಮಾರಂಭಗಳಲ್ಲಿಯೂ ಭಾಗವಹಿಸಿ ತಾಳ್ಮೆಯಿಂದ ಜಿಲ್ಲಾಡಳಿತ ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ದಸರಾ ಉಪಸಮಿತಿಗಳ ಜೊತೆ ಸಹಕರಿಸಿ ಕಾರ್ಯಕ್ರಮಗಳ ಯಶಸ್ವಿಗೆ ಎಲ್ಲಾ ಮಾಧ್ಯಮದವರ ಅಗತ್ಯ ಸಹಕಾರ ನೀಡಿದ್ದೀರಿ.

ಈ ನಿಟ್ಟಿನಲ್ಲಿ ಯಶಸ್ವಿಗೆ ಸಹಕರಿಸಿದ ಎಲ್ಲಾ ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ ಹಾಗೂ ಛಾಯಾಗ್ರಾಹಕ ಮಿತ್ರರಿಗೆ ಜಿಲ್ಲಾಡಳಿತದ ಪರವಾಗಿ ಹಾಗೂ ಎಲ್ಲಾ ದಸರಾ ಉಪ ಸಮಿತಿಯ ಪರವಾಗಿ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Tags: