ಮೈಸೂರು : ಆರ್‌ಸಿಬಿ ವಿಜಯೋತ್ಸವದ ರೋಡ್ ಶೋಗೆ ಸರ್ಕಾರ ಅನುಮತಿ ನಿರಾಕರಿಸಿತ್ತು. ಆಗ ಇದೇ ಬಿಜೆಪಿ ನಾಯಕರು ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು ಎಂದು ಸಿಎಂ ಸಿದ್ದರಾಮಯ್ಯ ಪೋಸ್ಟ್ ಅನ್ನು ಪ್ರದರ್ಶಿಸಿದರು.
ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಭಾನುವಾರ ಸಂಜೆ ಮೈಸೂರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಆರ್‌ಸಿಬಿ ಕಾಲ್ತುಳಿತದಂತಹ ಪ್ರಕರಣ ಜರುಗಬಾರದಿತ್ತು. ನಾನು ಮುಖ್ಯಮಂತ್ರಿ ಆದಾಗಿನಿಂದ ಯಾವತ್ತೂ ಇಂತಹ ಪ್ರಕರಣ ಆಗಿರಲಿಲ್ಲ. ಈಗ ಆಗಿರುವುದು ನೋವಾಗಿದೆ. ಕೇವಲ ನನಗೆ ಮಾತ್ರವಲ್ಲ ಎಲ್ಲರಿಗೂ ನೋವಾಗಿದೆ. ಇದರಲ್ಲಿ ನಾವೇನು ತಪ್ಪು ಮಾಡಿಲ್ಲ. ಇದೀಗ ಬಿಜೆಪಿಯವರು ಪ್ರಕರಣಕ್ಕೆ ಬೇರೆ ಬಣ್ಣ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಆರ್‌ಸಿಬಿ ರೋಡ್ ಶೋಗೆ ಅನುಮತಿ ನಿರಾಕರಿಸಲಾಗಿತ್ತು. ಆಗ ಇದೇ ಬಿಜೆಪಿ ಮಂದಿ ರೋಡ್ ಶೋಗೆ ಅನುಮತಿ ನೀಡದ ಗೃಹ ಸಚಿವರನ್ನು ಅಸಮರ್ಥ ಎಂದು ಕರೆದಿದ್ದರು ಎಂದು ಅಂದು ಬಿಜೆಪಿ ನಾಯಕರು ಮಾಡಿದ್ದ ಟ್ವಿಟ್ ಮಾಡಿದ್ದನ್ನು ಪ್ರದರ್ಶಿಸಿದರು.





