Mysore
24
broken clouds

Social Media

ಗುರುವಾರ, 15 ಜನವರಿ 2026
Light
Dark

ಅಂದಿನ ಮುಡಾ ಆಯುಕ್ತರನ್ನು ಬದಲಾಯಿಸುವಂತೆ ಸರ್ಕಾರಕ್ಕೆ ಹೇಳಿದ್ದೆ: ಎಸ್‌ಟಿಎಸ್

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 50:50 ಅನುಪಾತದಲ್ಲಿ ಸೈಟು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ ಸೋಮಶೇಖರ್‌ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮುಡಾದಲ್ಲಿ ಸೈಟ್‌ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿ ಮೀಟಿಂಗ್‌ ನಲ್ಲೂ ಶಾಸಕರ ಫೈಲ್‌ಗಳೇ ಇರುತ್ತಿದ್ದವು. ಆದರೆ ಅದ್ಯಾವುದು ಚರ್ಚೆಯಾಗದೇ ಹೊರಹೋಗುತ್ತಿದ್ದವು. ಅಲ್ಲಿನ ಬಹುತೇಕ ವಿಷಯಗಳು ಶಾಸಕರಿಗೆ ಸಂಬಂಧಿಸಿದ್ದಾಗಿವೆ ಎಂದು ಸ್ಪೋಟಕ ಮಾಹಿತಿ ಹೊರಹಾಕಿದ್ದಾರೆ.

ಮುಡಾ ಇರುವುದು ಜನಸಾಮಾನ್ಯರ ಅಭಿವೃದ್ಧಿಗಾಗಿ ಆದರೆ ಇಲ್ಲಿ ಆಗುತ್ತಿರುವುದೇ ಬೇರೆ. ಮುಡಾ ಬೋರ್ಡ್‌ನಲ್ಲಿನ ವ್ಯವಸ್ಥೆ ಬದಲಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಇನ್ನು 50:50 ಅನುಪಾತದಲ್ಲಿ ಸೈಟು ಹಂಚಿಕೆ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿಗಳ ಗಮನಕ್ಕೆ ತರುತ್ತಿರಲಿಲ್ಲ. ಆಯುಕ್ತರು ಯಾವುದೇ ಸಭೆ ಮಾಡದೇ ಸೈಟ್‌ಗಳನ್ನು ಹಂಚಿದ್ದಾರೆ. ಯಾವುದೇ ಉನ್ನತಮಟ್ಟದ ಚರ್ಚೆ ಇಲ್ಲದೆಯೇ ಮುಡಾ ಸೈಟ್‌ಗಳನ್ನು ಹಂಚಲಾಗಿದ್ದು, ಹಿಂದಿನ ಆಯುಕ್ತರನ್ನು ಬದಲಾಯಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೆ ಎಂದರು.

ಇನ್ನು ಮುಡಾ ಅಧಿಕಾರಿ ಜಾತಿಯ ಪ್ರಭಾವದಿಂದ ಅಲ್ಲಿಯೇ ಉಳಿಯುವಂತೆ ಆಯಿತು. ಅಂದೇ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದ್ದರೇ ಈ ಎಲ್ಲಾ ಹಗರಣಗಳು ಸರಿದೂಗುತ್ತಿದ್ದವೇನೋ ಎಂದು ಅವರು ಹೇಳಿದರು.

ಮುಡಾದಲ್ಲಿ ನನ್ನ ಹೆಸರಿನಲ್ಲಿ ಅಥವಾ ಬೇನಾಮಿ ಹೆಸರಿನಲ್ಲಿ ಒಂದೇ ಒಂದು ನಿವೇಶನ ಮಂಜೂರಾಗದ್ದಲ್ಲಿ ನನ್ನ ಶಾಸಕನ ಸ್ಥಾನಕ್ಕೆ ರಾಜೀನಾಮೆ ನೀಡತ್ತೇನೆ. ನಾನು ನನಗಾಗಲಿ, ಬೇರೆಯವರಿಗಾಗಲಿ ಒತ್ತಡ ಹೇರಿ ನಿವೇಶನ ಕೊಡಿಸಿಲ್ಲ. ಈ ಮುಡಾ ಅಕ್ರಮದಲ್ಲಿ ನನ್ನ ಹೆಸರು ತರಬೇಡಿ ಎಂದು ತಿಳಿಸಿದರು.

Tags:
error: Content is protected !!