ಶ್ರೀರಂಗಪಟ್ಟಣ: ಸಾರ್ವಜನಿಕ ಸಶ್ಮಾನಕ್ಕೆ ಹೋಗುವ ರಸ್ತೆಗೆ ರೈತನೋರ್ವ ಬೇಲಿ ಹಾಕಿದ್ದಕ್ಕೆ ಮೃತ ವ್ಯಕ್ತಿಯನ್ನು ರಸ್ತೆ ಮಧ್ಯೆಯಲ್ಲಿ ಅಂತ್ಯಕ್ರಿಯೆ ನಡೆದಿತ್ತು. ಈ ಘಟನೆ ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಾಲ್ಲೂಕಿನ ಹೆಬ್ಬಾಡಿಹುಂಡಿ ಗ್ರಾಮದ ಸ್ಮಶಾನ ರಸ್ತೆಗೆ ಅಡ್ಡಲಾಗಿ ರೈತನೋರ್ವ ತಂತಿ ಬೇಲಿ ಹಾಕಿಕೊಂಡಿದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು, ಸೋಮವಾರ ರಸ್ತೆ ಮಧ್ಯೆ ಮೃತ ಸತೀಶ್ ಎಂಬಾತನ ಅಂತ್ಯಕ್ರಿಯೆ ನೆರವೇರಿಸಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೆ ಎಚ್ಚೆತ್ತ ತಾಲ್ಲೂಕು ಆಡಳಿತಾಧಿಕಾರಿ ಪರಶುರಾಮ್ ಸತ್ತಿ ಗೇರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ರಸ್ತೆಗೆ ಬೇಲಿ ಹಾಕಿದ್ದ ರೈತ ಹಾಗು ಪಕ್ಕದ ರೈತ ನಿಂದ ತಲಾ 10-10 ಅಡಿ ಜಾಗವನ್ನು ಸ್ಮಶಾನದ ರಸ್ತೆಗೆ ಬಿಡಿಸಿ ಸಮಸ್ಯೆ ಬಗೆ ಹರಿಸಿದ್ದಾರೆ.





