ಮೈಸೂರು : ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ ಸುದ್ದಿ ಕೇಳಿ ನಮಗೆಲ್ಲಾ ಧಿಗ್ಬ್ರಮೆಯಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ನಗರದ ಜಯಲಕ್ಷ್ಮಿಪುರಂನಲ್ಲಿರುವ ಶ್ರೀನಿವಾಸ ಪ್ರಸಾದ್ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಶ್ರಿನಿವಾಸ ಪ್ರಸಾದ ಅವರು ಶೋಷಿತ ವರ್ಗದವರ ಧ್ವನಿಯಾಗಿ ಎಲ್ಲರಿಗು ಶಕ್ತಿ ಹಾಗೂ ನೆಮ್ಮದಿ ತಂದಿದ್ದರು ಎಂದರು.
50ವರ್ಷಗಳ ಸೂಧೀರ್ಘ ರಾಜಕಾರಣವನ್ನು ಮುಗಿಸಿ, ಒಂದು ಪುಸ್ತಕವನ್ನು ಬಿಡುಗಡೆ ಮಾಡಿ ರಾಜಕೀಯಕ್ಕೆ ತಿಲಾಂಜಲಿ ಇಟ್ಟು ನಿವೃತ್ತಿ ಪಡೆದವರು ಶ್ರೀನಿವಾಸ ಪ್ರಸಾದ್ ಎಂದರು. ಬಹಳ ಪ್ರಮಾಣಿಕ ಹಾಗೂ ಸಜ್ಜನ ರಾಜಕಾರಣಿಯಾಗಿ ಬೆಳೆದವರು ಶ್ರೀನಿವಾಸ್ ಪ್ರಸಾದ್. 1983ರಿಂದ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದೆ ಎಂದರು.
ರಾಜ್ಯಕ್ಕೆ ತೊಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ತಿಳಿಸಿದರು.