Mysore
28
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಮೈಸೂರಿನಲ್ಲಿ ಟೀಂ ಇಂಡಿಯಾ ಗೆದ್ದು ಬರಲಿ ಎಂದು ಗಣಪನಿಗೆ ವಿಶೇಷ ಪೂಜೆ

ಮೈಸೂರು : ಭಾರತ ಮತ್ತು ಸೌತ್‌ ಆಫ್ರಿಕಾ ತಂಡಗಳು ಮೊದಲ ಬಾರಿಗೆ ಐಸಿಸಿ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ೨೦೦೭ ರ ಬಳಿಕ ಟಿ೨೦ ವಿಶ್ವಕಪ್‌ ಗೆಲ್ಲದ ಭಾರತ ತಂಡವು ೧೦ ವರ್ಷಗಳ ನಂತರ ಕಪ್‌ ಗೆಲ್ಲುವ ವಿಶ್ವಾಸದೊಂದಿಗೆ ಅಖಾಡಕ್ಕೆ ಇಳಿಯುತ್ತಿದೆ.

ಇನ್ನು ಬಾರ್ಬಡೋಸ್​ ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಈ ರಣರೋಚಕ ಪಂದ್ಯದಲ್ಲಿ ಭಾರತ ತಂಡ ಗೆದ್ದು ಬರಲಿ ಎಂದು ಮೈಸೂರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ನಗರದ ಅಗ್ರಹಾರದ ಬಳಿಯಿರುವ ೧೦೧ ಗಣಪತಿ ದೇವಸ್ಥಾನದ ಬಳಿ ಬಿಜೆಪಿ ಯುವ ಮೋರ್ಚಾದಿಂದ ಭಾರತ ಗೆದ್ದು ಬರಲಿ ಎಂದು ದೇವರಿಗೆ  ಅರ್ಚನೆ ಮಾಡಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

Tags: