ಮೈಸೂರು: ನಾಡಿನಾಡ್ಯಂತ ಗಣೇಶ ಚತುರ್ಥಿ ಸಂಭ್ರಮ ಮನೆಮಾಡಿದ್ದು, ಮನೆ ಮನೆಗಳಲ್ಲಿ ಮಣ್ಣಿನ ಗಣಪತಿ ಕೂರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.
ಹಬ್ಬದ ಪ್ರಯುಕ್ತ ಪ್ರತಿಯೊಂದು ಗ್ರಾಮ ಮನೆ ಮನೆಗಳಲ್ಲೂ ಗಣೇಶನನ್ನು ಕೂರಿಸಿ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತಿದೆ. ಎಲ್ಲೆಡೆ ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನೇ ಕೂರಿಸಿ ನೈವೇದ್ಯ ಸಮರ್ಪಿಸಿ ಹಬ್ಬ ಆಚರಣೆ ಮಾಡಲಾಗುತ್ತಿದೆ.
ಇನ್ನು ಗ್ರಾಮದ ಬೀದಿ ಬೀದಿಗಳಲ್ಲೂ ಗಣೇಶನನ್ನು ಕೂರಿಸಿ ಯುವಕರು ಅತ್ಯಂತ ಸಂಭ್ರಮದಿಂದ ಹಬ್ಬ ಆಚರಣೆ ಮಾಡುತ್ತಿದ್ದಾರೆ.





