ಮೈಸೂರು: ಮದ್ಯ ಸೇವನೆಗೆ ಹಣ ನೀಡಲಿಲ್ಲ ವೆಂದು ತಾಯಿಯನ್ನೇ ಪಾಪಿ ಪುತ್ರನೊಬ್ಬ ಕೊಂದಿದ್ದಾನೆ
ಪಿರಿಯಾಪಟ್ಟಣ ತಾಲ್ಲೂಕು ನವಿಲೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಗನು ತಾಯಿ ಬಳಿಯಿದ್ದ 90 ಸಾವಿರ ಹಣಕ್ಕಾಗಿ ಹತ್ಯೆಗೈದಿದ್ದಾನೆ ಎನ್ನಲಾಗಿದೆ.
ತಾಯಿಯು ತಂದೆಗೆ ಹುಷಾರಿಲ್ಲದ ಕಾರಣ ಹಣವನ್ನು ಕೂಡಿಟ್ಟಿದ್ದು, ಪುತ್ರ ಹ ಣ ನೀಡುವಂತೆ ಪದೇ ಪದೇ ಪೀಡಿಸುತ್ತಿದ್ದ. ತಾಯಿ ಹಣವನ್ನು ಕೊಡದೆ ಇರುವ ಕಾರಣದಿಂದ ತಂದೆ ಆಸ್ಪತ್ರೆಗೆ ತೆರಳಿರುವ ಸಂಧರ್ಭ ದಲ್ಲಿ ಕೈಯಲ್ಲಿ ಹೊಡೆದು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಯ ಕುರಿತು ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





