ಮೈಸೂರು : ನಗರದ ಚಾಮರಾಜ ಕ್ಷೇತ್ರದ ಬಿಜೆಪಿ ವತಿಯಿಂದ ಸಿಂದೂರ ವಿಜಯೋತ್ಸವ ಹಿನ್ನಲೆ ತಿರಂಗಾ ಯಾತ್ರೆ ನಡೆಯಿತು.
ಸೈನಿಕರ ಸ್ಮರಣೀಯ ಸಾಧನೆಗಾಗಿ ದೇಶಭಕ್ತಿಯನ್ನು ಸಾರಲು ಮತ್ತು ತ್ರಿವರ್ಣ ಧ್ವಜದ ಘನತೆಯನ್ನು ಹರಡಲು, ಚಾಮರಾಜ ಕ್ಷೇತ್ರದಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು.
ನಗರದ ವಿ.ವಿ ಪುರಂ ಠಾಣೆ ಮುಂಭಾಗದಿಂದ ಹೊರಟ ಬೈಕ್ ರ್ಯಾಲಿಗೆ ಮಾಜಿ ಶಾಸಕರಾದ ನಾಗೇಂದ್ರ ಚಾಲನೆ ನೀಡಿದರು.
ಒಂಟಿಕೊಪ್ಪಲ್ ಮುಖ್ಯ ರಸ್ತೆ ಮೂಲಕ ಸಾಗಿ ಕೆ.ಡಿ ರೋಡ್ ಮಾರ್ಗ ಮತ್ತೆ ನಿರ್ಮಲ ಕಾನ್ವೆಂಟ್ ರಸ್ತೆ ಮೂಲಕ ವಿ.ವಿ ಪುರಂ ಪೋಲಿಸ್ ಠಾಣೆ ಎದುರು ಜಮಾವಣೆಗೊಂಡಿತು.





