Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಮತದಾನ ಜಾಗೃತಗಾಗಿ ಹಸ್ತಾಕ್ಷರ ಸಂಗ್ರಹಣಾ ಅಭಿಯಾನ

ಮೈಸೂರು : ಲೋಕಸಭಾ ಚುನಾವಣೆಯ ಪ್ರಯುಕ್ತ ಸ್ವೀಪ್ ಕಾರ್ಯಕ್ರಮದಡಿ ಮೈಸೂರು ಮಹಾನಗರ ಪಾಲಿಕೆಯ ವಲಯ ಕಛೇರಿ 06ರಲ್ಲಿ ಸಾರ್ವಜನಿಕರಿಗೆ ಮತದಾನ ಮಾಡುವಂತೆ ಪ್ರೇರೆಪಿಸಲು ವಲಯ ಕಛೇರಿಯ ಸ್ವಾಗತ ಕಮಾನು, ವಲಯ ಕಛೇರಿಯ ಮುಂಭಾಗದಲ್ಲಿ ಮತದಾನ ಕುರಿತು ಗೋಡೆಬರಹ, ಮತದಾನದ ಸೆಲ್ಫಿ ಕೌಂಟರ್ ಹಾಗೂ ” ನಾನು ಮತದಾನ ಮಾಡುತ್ತೇನೆ ” ಎಂಬ ಕುರಿತು ಹಸ್ತಾಕ್ಷರ ಸಂಗ್ರಹಣಾ ಅಭಿಯಾನವನ್ನು ಚಾಮರಾಜ ವಿಧಾನ ಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಾದ ವೆಂಕಟರಾಜ್ ರವರು ಉದ್ಘಾಟಿಸಿ ಸಾರ್ವಜನಿಕರಿಗೆ ಏಪ್ರಿಲ್ 26 ರಂದು ತಪ್ಪದೆ ಮತದಾನ ಮಾಡಲು ಮನವಿ ಮಾಡಿದರು.

ವಲಯ ಆಯುಕ್ತರಾದ ವಾಣಿ ವಿ ಆಳ್ವ, ಅಭಿವೃದ್ಧಿ ಅಧಿಕಾರಿ ವೆಂಕಟೇಶ್, ಪರಿಸರ ಅಭಿಯಂತರರು ‌ ಮೈತ್ರಿ, ಸಹಾಯಕ ಕಂದಾಯಾಧಿಕಾರಿಯವರಾದ ಸಿದ್ದರಾಜು ಮತ್ತು ಅಶೋಕ್, ಕಿರಿಯ ಅಭಿಯಂತರರು ಕೃಷ್ಣಮೂರ್ತಿ, ಹಿರಿಯ ಆರೋಗ್ಯ ನಿರೀಕ್ಷಕರು, ಕಂದಾಯ ಪರಿಶೀಲಕರು, ಕಛೇರಿ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು

Tags: