Mysore
20
overcast clouds
Light
Dark

ವಿಧಾನಸಭೆಯಲ್ಲಿ ಮೆಜಾರಿಟಿ ಇರೋದ್ರಿಂದ ಸಿದ್ದರಾಮಯ್ಯ ಸೇಫ್ ಆಗಿದ್ದಾರೆ : ಸಿಟಿ ರವಿ

ಮೈಸೂರು : ವಿಧಾನಸಭೆಯಲ್ಲಿ ಮೆಜಾರಿಟಿ ಇರುವ ಕಾರಣ ಸಿದ್ದರಾಮಯ್ಯ ಸೇಫ್‌ ಆಗಿದ್ದಾರೆ. ಆದರೆ ಅವರು ಜನ ಮತ್ತು ತಮ್ಮದೆ ಪಕ್ಷದ ಶಾಸಕರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ರವಿ ಹೇಳಿದರು.

ನಗರದಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹಣದ ದುರುಪಯೋಗ ಅವ್ಯಾಹತ್ವಾಗಿ ನಡೆದಿದೆ. ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಸಿದ್ದರಾಮಯ್ಯ ಇಂಧನ ಬೆಲೆ ಏರಿಕೆಯು ಬೇರೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸುವುದಕ್ಕೆ ಪರವಾನಿಗೆ ಕೊಟ್ಟಂತೆ ಎನ್ನುತ್ತಿದ್ದವರು ೨ನೇ ಬಾರಿ ಸಿಎಂ ಆದ ಬಳಿಕ ಇಂಧನ ಮೇಲಿನ ಸೆಸ್‌ ಅನ್ನು ೨ ಬಾರಿ ಹೆಚ್ಚಿಸಿದ್ದಾರೆ ಎಂದು ಕಿಡಿಕಾರಿದರು. ಅಲ್ಲದೆ ಮುಖ್ಯಮಂತ್ರಿಯಾದ ಬಳಿಕ ನೋಂದಣಿ ಶುಲ್ಕ ಹೆಚ್ಚಾಗಿದೆ. ವಾಹನ ನೋಂದಣಿ ಶುಲ್ಕ ಜಾಸ್ತಿಯಾಗಿದೆ. ಹಾಲಿನ ದರ ಏರಿಕೆ ಆಗಿದೆ. ನೀರಿನ ದರ ಏರಿಸುವ ಸಾಧ್ಯತೆಯೂ ಇದೆಯಂತೆ ಎಂದು ಎಂದರು.

ಹಾಲು ಉತ್ಪಾದಕರಿಗೆ ನೀಡುವ ಸಬ್ಸಿಡಿಯನ್ನು ಸರ್ಕಾರ ಕಳೆದ ೮ ತಿಂಗಳಿಂದ ಬಾಕಿ ಉಳಿಸಿಕೊಂಡಿದೆ. ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಬೇರೆ ಕೆಲಸಗಳಿಗೆ ದುರುಪಯೋಗವಾಗುತ್ತಿದೆ. ವಾಲ್ಮೀಕಿ ನಿಗಮದ ದುರ್ಬಳಕೆಯಾದ ೧೮೭ ಕೋಟಿಯಲ್ಲಿ ಕೇವಲ ೧೫ ಕೋಟಿ ರಿಕವರಿ ಆಗಿದೆ. ಅದರಲ್ಲಿ ತೆಲಂಗಣಾ ವಿಧಾನಸಭಾ ಚುನಾವಣೆಗೆ ಎಷ್ಟು ಹಣ ಹೋಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಬೇಕು ಎಂದು ಕೇಳಿದರು.