Mysore
19
broken clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಸಿದ್ದರಾಮಯ್ಯಗೆ ಈಗ ಹಿಂದೂ ದೇವರ ನೆನಪಾಗಿದೆ: ಪ್ರತಾಪ್‌ ಸಿಂಹ

ಮೈಸೂರು: ಸಿಎಂ ಸಿದ್ದರಾಮಯ್ಯಗೆ ಮುಡಾ ಸಂಕಷ್ಟು ಎದುರಾದಾಗಿನಿಂದ ಚಾಮುಂಡಿ, ಹಾಸನಾಂಬೆ ತಾಯಿ ನೆನಪಾಗಿದ್ದಾರೆ. ಸಿದ್ದರಾಮಯ್ಯಗೆ ಕಷ್ಟ ಬಂದಾಗ ಅವರ ಸಹಾಯಕ್ಕೆ ಬರುವುದು ನಮ್ಮ ದೇವಾನುದೇವತೆಗಳೇ ಹೊರತು ಬೇರೆ ಧರ್ಮದವರಲ್ಲ. ಹೀಗಾಗಿ ಇನ್ಮುಂದೆ ಸಿದ್ದರಾಮಯ್ಯ ಹಿಂದೂಗಳ ಪರ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದರು.

ಮಂಗಳವಾರ ನಗರದ ಜನಲದರ್ಶಿನಿ ಅತಿಥಿಗೃಹದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಉತ್ತರ ಕರ್ನಾಟದ ಜಿಲ್ಲೆಗಳ ರೈತರ ಪಿತ್ರಾರ್ಜಿತ ಆಸ್ತಿಗಳಿಗೆ ವಕ್ಫ್‌ ಮಂಡಳಿಯಿಂದ ನೋಟಿಸ್‌ ಬಂದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಮುಸ್ಲಿಮರು ವಕ್ಫ್‌ ಆಸ್ತಿ ಎನ್ನುತ್ತಾರಲ್ಲ, ಅವರಿಗೆ ಯಾರಿಂದ ಬಂತು ಈ ಆಸ್ತಿ? ಅಕ್ಬರ್‌, ಔರಂಗಜೇಬ್‌, ಜಿನ್ನಾ ಕೊಟ್ಟ ಆಸ್ತಿಯೇ ಇದು? ಪ್ರತ್ಯೇಕ ಮುಸ್ಲಿಮರಿಗೆ ಎಲ್ಲಿಂದ ಬಂತು? ಅವರಿಗೆ ಯಾರಿಂದ ಬಳುವಳಿ ಬಂದಿದ್ದು ಎಂದು ಪ್ರಶ್ನಿಸಿದರು.

ಕೇವಲ ವಿಜಯಪುರ ಮಾತ್ರವಲ್ಲ. ಹೂಣಸೂರಿನ ಗಣೇಶ ದೇವಸ್ಥಾನ, ಚಿಕ್ಕಮಗಳೂರಿನ ಖಾಸಗಿ ಆಸ್ತಿಯನ್ನು ವಕ್ಫ್‌ ಆಸ್ತಿ ಎಂದು ಹೇಳಿ ಕಬಳಿಸುವ ಪ್ರಯತ್ನ ನಡೆದಿದೆ. ರಾಜ್ಯದಲ್ಲಿನ 1.25ಲಕ್ಷ ಎಕರೆ ಜಮೀನು ತಮಗೆ ಸೇರಿದ್ದು ಎಂದು ವಕ್ಫ್‌ ಮಂಡಳಿ ವಾದಿಸುತ್ತಿದೆ. ಆದರೆ ಯಾವ ಮುಸಲ್ಮಾನರಿಗೂ ಕೃಷಿಗೆ ಜಮೀನು ಬಿಟ್ಟುಕೊಟ್ಟಿಲ್ಲ. ಬದಲಾಗಿ ರಿಯಲ್‌ ಎಸ್ಟೇಟ್‌ ದಂದೆ ನಡೆಯುತ್ತಿದೆ. ಹೀಗಾಗಿ, ಕೇಂದ್ರ ಸರ್ಕಾರ ಕೂಡಲೇ ವಕ್ಫ್‌ ಕಾಯ್ದೆಯನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಸಿಎಂ ಸಿದ್ದರಾಮಯ್ಯ ಅವರು ಮೊದಲು ಕೇಸರಿ ಶಾಲು ಹಾಕಿದರೆ ಕಿತ್ತು ಬಿಸಾಡುತ್ತಿದ್ದರು. ಮುಡಾ ಪ್ರಕರಣ ನಂತರ ಹಿಂದೂ ಧರ್ಮದ ಮೇಲೆ ಅವರಿಗೆ ನಂಬಿಕೆ ಬಂದಿದೆ. ನಮ್ಮ ದೇವರ ಮೇಲೆ ಶ್ರದ್ಧೆ, ಭಕ್ತಿ ಕೂಡ ಬಂದಿದೆ. ಸಿದ್ದರಾಮಯ್ಯ ಅವರನ್ನು ಕಾಪಾಡುವುದು ನಮ್ಮ ಹಿಂದೂಗಳೇ ಎಂದು ಹೇಳಿದರು.

ಯತ್ನಾಳ್‌ ಬಿಜೆಪಿಯ ನೇತಾರ
ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ ರಾಜ್ಯ ಬಿಜೆಪಿಯ ಜನಪ್ರಿಯ ನೇತಾರ. ವಕ್ಫ್‌ ವಿರುದ್ಧ ಮೊದಲು ಧ್ವನಿ ಎತ್ತಿದ್ದು ಅವರೇ. ವಿಜಯಪರದಲ್ಲಿ ರೈತರ ಅಹವಾಲು ಆಲಿಸಲಿರುವ ಬಿಜೆಪಿ ತಂಡದಲ್ಲಿ ಕಣ್ತಿಪ್ಪಿನಿಂದ ಅವರ ಹೆಸರು ಬಿಟ್ಟು ಹೋಗಿದ್ದು, ಇದೀಗ ಸರಿಪಡಿಸಲಾಗಿದೆ. ಅವರ ನೇತೃತ್ವದಲ್ಲಿ ನವೆಂಬರ್ 3-4 ರಂದು ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು.

Tags:
error: Content is protected !!