ಪ್ರಶಾಂತ್ ಎನ್.ಮಲ್ಲಿಕ್
ಮೈಸೂರು: ರಾಜ್ಯ ಸರ್ಕಾರವೂ ಸರ್ಕಾರ ನೌಕರರಿಗೆ ಸಂಬಳ ನೀಡದಷ್ಟು ದಿವಾಳಿಯಾಗಿದೆ ಎಂದು ಮಾಜಿ ಮೇಯರ್ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಇಂದು(ಏಪ್ರಿಲ್.4) 7ನೇ ವೇತನದ ಹೆಚ್ಚುವರಿ ವೇತನ ಭರಿಸಲು ಸರ್ಕಾರ ಸುತ್ತೋಲೆ ಹೊರಡಿಸಿರುವ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಹೆಚ್ಚುವರಿ ವೇತನವನ್ನು ಸ್ಥಳೀಯ ಸಂಸ್ಥೆಗಳ ಆರ್ಥಿಕ ಮೂಲದಿಂದ ಭರಿಸಬೇಕೆಂದು ನಿರ್ದೇಶನ ನೀಡಿದೆ. ಹಾಗಾದರೆ ಯಾವ ಪುರುಷಾರ್ಥಕ್ಕಾಗಿ 7ನೇ ವೇತನ ಜಾರಿ ಮಾಡಬೇಕಿತ್ತು. ಸ್ಥಳೀಯ ಸಂಸ್ಥೆಗಳ ಮೂಲಕ ವೇತನ ಭರಿಸುವುದಾದರೆ, ಸಾರ್ವಜನಿಕರ ಮೇಲೆ ಹೆಚ್ಚಿನ ತೆರಿಗೆ ವಿಧಿಸಬೇಕಾಗುತ್ತದೆ. ಹೀಗಾಗಿ ಸರ್ಕಾರ ಈ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ನೌಕರರಿಗೆ ಹೆಚ್ಚುವರಿ ವೇತನ ಕೊಡಲು ಹೆಣಗಾಡುತ್ತಿರುವ ಸರ್ಕಾರವವೂ ಇನ್ನು ಮುಂದೆ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ಸ್ಥಳೀಯ ಸಂಸ್ಥೆಯಿಂದಲೇ ವೇತನ ಭರಿಸಬೇಕು. ಅಲ್ಲದೇ
ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವ ನೌಕರರ ಹೆಚ್ಚುವರಿ ವೇತನ ಭರಿಸಲು ಸೂಚನೆ ನೀಡಬೇಕು. ಜೊತೆಗೆ ತೆರಿಗೆಯನ್ನು 15ನೇ ಹಣಕಾಸು ಅನುದಾನಗಳಲ್ಲಿ ಭರಿಸಲು ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.





