ಮೈಸೂರು: ಕೇವಲ 5ರೂ. ಇದ್ದ ಜನನ ಮತ್ತು ಮರಣದ ಪತ್ರ ಇನ್ನೂ ಮುಂದೆ ದುಬಾರಿಯಾಗಿದ್ದು, ಕೇವಲ 25 ರೂಪಾಯಿ ನೀಡಿ 5 ಪ್ರತಿ ಪಡೆಯುತ್ತಿದ್ದ ಸಾರ್ವಜನಿಕರಿಗೆ ದಿಢೀರ್ ಬೆಲೆ ಏರಿಕೆಯಿಂದ ಶಾಕ್ ನೀಡಿದಂತಾಗಿದೆ.
ಬಸ್, ಪೆಟ್ರೋಲ್, ಡೀಸೆಲ್, ಹಾಲು ದರ ಹೆಚ್ಚಳದ ನಡುವೆ ಜನಸಾಮಾನ್ಯರಿಗೆ ತಮ್ಮ ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯಲು ಬೆಲೆ ಏರಿಕೆಯಾಗಿದೆ. ಇದೀಗ ಜನನ ಮತ್ತು ಮರಣ ಪ್ರಮಾಣ ಪತ್ರಕ್ಕೆ 50 ರೂಪಾಯಿಗಳನ್ನು ನಿಗಧಿ ಪಡಿಸಲಾಗಿದೆ. ಈ ನೂತನ ಶುಲ್ಕದ ಪ್ರಕಾರ 5 ಪ್ರತಿಗೆ 250 ರೂ ನಿಗಧಿ ಪಡಿಸಿದ್ದು,
ಒಂದೇ ಬಾರಿಗೆ 10 ಪಟ್ಟು ಶುಲ್ಕವನ್ನು ನಗರಭಿವೃದ್ಧಿ ಇಲಾಖೆ ಹೆಚ್ಚಿಸಿದೆ.
ಮೈಸೂರು ಮಹಾನಗರ ಪಾಲಿಕೆಯಲ್ಲಿ ಇಂದು(ಫೆಬ್ರವರಿ.6) ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು ನಗರಾಭಿವದ್ಧಿ ಇಲಾಖೆ ವತಿಯಿಂದ ಶುಲ್ಕ ಹೆಚ್ಚಳ ಮಾಡಲಾಗಿದೆ. ಕೇವಲ 5 ರೂಪಾಯಿ ಇದ್ದ ಜನನ ಮತ್ತು ಮರಣ ಪತ್ರವನ್ನು ಇದೀಗ 50 ರೂಪಾಯಿ ಶುಲ್ಕ ನಿಗಧಿಯಾಗಿದೆ. ಈ ದರವೂ ಬುಧವಾರದಂದು (ಫೆ.5) ಜಾರಿಯಾಗಿದೆ. ಹೀಗಾಗಿ ಈ ಹಣವನ್ನು ಪಾವತಿಸಿ ಜನನ ಮತ್ತು ಮರಣ ಪತ್ರ ಪಡೆಯಬಹುದಾಗಿದೆ. ಈ ಹೊಸ ನಿಗಧಿತ ದರಕ್ಕೆ ಸಾರ್ವಜನಿಕರು ಸಹಕರಿಸುವಂತೆ ಮಹಾನಗರ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸೀಫ್ ಮನವಿ ಮಾಡಿದ್ದಾರೆ.





