ಮೈಸೂರು: ಸಾಲ ವಸೂಲಿಯ ಹಣಕ್ಕೆ ಪಟ್ಟು ಹಿಡಿದ ವ್ಯಕ್ತಿಯೋರ್ವ ಮನೆ ಮುಂದೆ ಬಂದು ಗೃಹಿಣಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಗರದ ಮೇಟಗಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಸನ್ನ ಎಂಬ ವ್ಯಕ್ತಿಯೇ ಗೃಹಿಣಿಗೆ ಲೈಂಗಿಕ ಕಿರುಕುಳ ನೀಡಿದವನು. ನಾಗನಹಳ್ಳಿಯ ರಘು ಎಂಬುವವರು ಚಿಕಿತ್ಸೆಗಾಗಿ ಪ್ರಸನ್ನ ಬಳಿ 7 ಸಾವಿರ ಸಾಲ ಪಡೆದಿದ್ದಾರೆ. ಈ ಹಣಕ್ಕೆ 20% ಬಡ್ಡಿಯನ್ನೂ ನೀಡುತ್ತಾ ಬಂದಿದ್ದಾರೆ. ಅಸಲನ್ನು 6 ತಿಂಗಳ ನಂತರ ಕೊಡುವುದಾಗಿ ರಘು ತಿಳಿಸಿದ್ದಾರೆ. ಇದಕ್ಕೆ ಒಪ್ಪದ ಪ್ರಸನ್ನ ಹಣಕ್ಕೆ ಪಟ್ಟು ಹಿಡಿದು ಮನೆ ಹತ್ತಿರ ಬಂದು ರಘು ಪತ್ನಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಬಟ್ಟೆ ಬಿಚ್ಚಿ ನಿಂತು ಬಾ ಎಂದು ಕರೆದು ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ರಘು ಪತ್ನಿ ಮೇಟಗಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಎಫ್ಐಆರ್ ದಾಖಲಾಗಿದೆ.