Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಜೆ.ಪಿ ನಗರದಲ್ಲಿ ರಸ್ತೆಗೆ ಒಳಚರಂಡಿ ನೀರು; ರೋಗ ಹರಡುವ ಆತಂಕ

ಮೈಸೂರು: ತಾಲೂಕಿನ ಕೆ. ಸಾಲುಂಡಿ ಗ್ರಾಮದ ಕಲುಷಿತ ನೀರು ಪ್ರಕರಣ ಮಾಸುವ ಮುನ್ನವೇ  ನಗರದ ಪ್ರತಿಷ್ಠಿತ ಬಡವಾಣೆಗಳಲ್ಲಿ ಒಂದಾದ ಜೆಪಿ ನಗರದಲ್ಲಿ  ಇಂತದ್ದೆ  ಪ್ರಕರಣ ಮರುಕಳಿಸುವ ಸಾಧ್ಯತೆಗಳು ಕಂಡು ಬರುತ್ತಿದೆ. ಈ ಕುರಿತಾದ ವಿಶೇಷ ಸ್ಟೋರಿಯೊಂದನ್ನು ಆಂದೋಲನ ಬಳಗ ಮಾಡಿದೆ.

ಇಲ್ಲಿನ ಜೆಪಿ ನಗರದಲ್ಲಿ ಒಳ ಚರಂಡಿ ತುಂಬಿ ಕೊಳಚೆ ನೀರು ರಸ್ತೆ ತುಂಬಾ ಹರಿಯುತ್ತಿದ್ದು, ಸ್ಥಳೀಯರಿಗೆ ರೋಗಗಳ ಭಯ ಹೆಚ್ಚಾಗಿದೆ. ಕೆಲವು ದಿನಗಳ ಹಿಂದೆ ಜಿಲ್ಲೆಯ ಕೆ.ಸಾಲುಂಡಿ ಗ್ರಾಮದಲ್ಲಿ ಯುವಕನೊಬ್ಬ ಕಲುಷಿತ ನೀರು ಕುಡಿದು ಸಾವನ್ನಪ್ಪಿದ್ದ ಪ್ರಕರಣ ಮರೆ ಮಾಚುವ ಮುನ್ನವೇ ನಗರದ ಜೆಪಿ ನಗರ ಬಡಾವಣೆಯಲ್ಲಿ ಮತ್ತೊಂದು ಪ್ರಕರಣ ಎದುರಾಗಿದೆ.

ಹವಾಮಾನ ವೈಪರಿತ್ಯದಿಂದ ಉಂಟಾದ ಮಳೆಯಿಂದಾಗಿ ಜಿಪಿ ನಗರ ಬಡಾವಣೆಯಲ್ಲಿ ಒಳಚರಂಡಿಗಳು ತುಂಬಿದ್ದು, ಕೊಳಚೆ ನೀರು ರಸ್ತೆ, ಮನೆಯ ಮುಂದೆ ಹರಿಯುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರಿಗೆ ಎಷ್ಟೇ ದೂರು ನೀಡಿದರು ಏನು ಪ್ರಯೋಜವಾಗಿಲ್ಲ.

ಹೀಗಾಗಿ ಅಲ್ಲಿನ ಸ್ಥಳೀಯರು, ಈ ಸಂಬಂಧ ಇನ್ನೆರೆಡು ದಿನಗಳಲ್ಲಿ ಕ್ರಮ ಕೈಗೊಳ್ಳದೇ ಹೋದರೇ, ಪಾಲಿಕೆ ಹಾಗೂ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಒಳಚರಂಡಿ ನೀರು ರಸ್ತೆ ಮೇಲೆ ಹರಿದಾಡುತ್ತಿರುದರಿಂದ ಮಕ್ಕಳು ಮತ್ತು ವಯಸ್ಸಾದವರಲ್ಲಿ ಹಲವಾರು ಖಾಯಿಲೆಗಳು ಕಂಡು ಬರುತ್ತಿದೆ. ಈ ಬಗ್ಗೆ ಎಷ್ಟು ಹೇಳಿದರು ಪಾಲಿಕೆ ನಿರ್ಲಕ್ಷ್ಯ ವಹಿಸುತ್ತಿರುವುದಕ್ಕೆ ಬಡಾವಣೆ ಜನರು ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸ್ಥಳಿಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಆಂದೋಲನ ಬಳಗ, ಅಲ್ಲಿನ ಜನರ ಕೂಗುಗಳಿಗೆ ಧನಿಯಾಯಿತು.

ವರದಿ: ಪ್ರದ್ಯುಮ್ನ ಎನ್‌.ಎಂ
ಕ್ಯಾಮರಮೆನ್‌: ಮಧುಚಂದ್ರ ಶೆಟ್ಟಿ.

Tags: