ಬೆಂಗಳೂರು : ಸ್ವತಂತ್ರ ಪತ್ರಕರ್ತರಾಗಿದ್ದ ಬಹುಮುಖ ಪ್ರತಿಭೆ ಛಾಯಾ ಶ್ರೀವತ್ಸ (78) ಇಂದು(ಏ.14) ನಿಧನರಾಗಿದ್ದಾರೆ.
ಮೂಲತಃ ಮೈಸೂರಿನವರಾದ ಅವರು ಬಾಲಕಿಯಾಗಿದ್ದಾಗ ಅರಮನೆಯಲ್ಲಿ ರಾಜಕುಮಾರಿ ಗಾಯಿತ್ರಿದೇವಿ ಅವರ ಸಖಿಯಾಗಿದ್ದರು. ಮೈಸೂರು ಅರಮನೆಯಲ್ಲಿ ವಿಶೇಷ ಶಿಕ್ಷಣ ಪಡೆದ ಛಾಯಾ ಅವರು, ಮಹಾರಾಣಿ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಪದವಿ ಪಡೆದಿದ್ದರು.
ವಿವಾಹದ ಬಳಿಕ ಮುಂಬೈನಲ್ಲಿ ನೆಲಿಸಿದ್ದ ಅವರು, ಬಾಂಬೆ ಆಕಾಶವಾಣಿ ಹಾಗೂ ಹಲವು ಮ್ಯಾಗಝಿನ್‌ಗಳಿಗೆ 80ರ ದಶಕದ ಪ್ರಸಿದ್ಧ ಸಿನಿಮಾ ತಾರೆಯರ ಸಂದರ್ಶನ ಮಾಡಿದ್ದರು.

ಮುಂಬೈನ ತಾಜ್ ಹೋಟೆಲ್‌ನ ʻಇನ್‌ಹೌಸ್ ಜರ್ನರ್ʼ ಪತ್ರಿಕೆಯ ಸಂಪಾದಕರಾಗಿದ್ದು. ಡೆಕ್ಕನ್ ಹೆರಾಲ್ಡ್‌ನಲ್ಲಿ ಅವರ ಅಂಕಣ ಜನಪ್ರಿಯವಾಗಿತ್ತು. ಬಿಬಿಸಿಯ ಸೀರಿಯಲ್ ಒಂದಕ್ಕೆ ಸ್ಕ್ರಿಪ್ಟ್ ಬರೆದಿದ್ದರು. ಮಾಡೆಲಿಂಗ್‌ನಲ್ಲಿಯೂ ಹೆಸರು ಗಳಿಸಿದ್ದರು.

ಬೆಂಗಳೂರಿನಲ್ಲಿ ʻಬ್ಲಾಸಂ ಸಿಟಿʼ ಎಂಬ ಮೊದಲ ಸಿಟಿ ಮ್ಯಾಗಝಿನ್ ಆರಂಭಿಸಿದ್ದರು. ಇವರು ಪ್ರತಿದ್ಧ ಬರಹಗಾರರು ಕೂಡ ಆಗಿದ್ದರು. ಮುಂಬೈನ ಕಾಲೇಜು ಒಂದರಲ್ಲಿ ಪತ್ರಿಕೋದ್ಯಮದ ಪ್ರಾಧ್ಯಾಪಕರಾಗಿದ್ದರು.
ಪುತ್ರ ಅನಿಲ್ ಶ್ರೀವತ್ಸ, ಅರ್ಜುನ್ ಶ್ರೀವತ್ಸ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.





