Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಶ್ರೀಗಂಧದ ವಸ್ತುಸಂಗ್ರಹಾಲಯ ಮೃಗಾಲಯಕ್ಕೆ ಸ್ಥಳಾಂತರ: ಈಶ್ವರ್‌ ಖಂಡ್ರೆ

ಮೈಸೂರು: ಮೈಸೂರು ಅರಣ್ಯ ಭವನದ ಶ್ರೀಗಂಧದ ಕೋಟೆಯಲ್ಲಿರುವ ಶ್ರೀಗಂಧ ವಸ್ತುಸಂಗ್ರಹಾಲಯವನ್ನು ಮೈಸೂರು ಮೃಗಾಲಯಕ್ಕೆ ಸ್ಥಳಾಂತರಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅನುಮತಿ ನೀಡಿದ್ದಾರೆ.

ಕೂರ್ಗಳ್ಳಿಯ ‘ಚಾಮುಂಡಿ ವನ್ಯಜೀವಿ ಸಂರಕ್ಷಣೆ, ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರ’ದಲ್ಲಿಂದು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈ ವಸ್ತುಸಂಗ್ರಹಾಲಯವನ್ನು ಚಾಮರಾಜೇಂದ್ರ ಮೃಗಾಲಯಕ್ಕೆ ಸ್ಥಳಾಂತರಿಸಿದರೆ, ಪ್ರವಾಸಿಗರಿಗೆ ಶ್ರೀಗಂಧದ ಹಿರಿಮೆಯನ್ನು ತಿಳಿಯಲು ಅನುಕೂಲವಾಗುತ್ತದೆ. ಇದರಿಂದ ಮೈಸೂರಿನ ಖ್ಯಾತಿಯೂ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಪುನರ್ವಸತಿ ಕೇಂದ್ರದಲ್ಲಿ ನಿರ್ಮಿಸಿರು ವನ್ಯಜೀವಿಗಳ ಶಸ್ತ್ರ ಚಿಕಿತ್ಸಾ ಕೊಠಡಿ ಮತ್ತು ಆಸ್ಪತ್ರೆಯನ್ನು ಉದ್ಘಾಟಿಸಿದ ಸಚಿವರು, ಅಲ್ಲಿರುವ ವೈದ್ಯಕೀಯ ಸಲಕರಣೆ ಮತ್ತು ಸೌಲಭ್ಯಗಳನ್ನು ವೀಕ್ಷಿಸಿದರು.

ಆವರಣದಲ್ಲಿ ಆನೆಗಳಿಗಾಗಿಯೇ ನಿರ್ಮಿಸಲಾಗಿರುವ ಈಜುಕೊಳದಲ್ಲಿ ಸ್ವಚ್ಛಂದವಾಗಿ ಈಜಾಡುತ್ತಿದ್ದ ಆನೆಗಳನ್ನು ಹಾಗೂ ಗಾಯಗೊಂಡ ಮತ್ತು ಅತಿ ಉಗ್ರ ಸ್ವಭಾವದ ಹುಲಿ, ಚಿರತೆಗಳನ್ನು ಇಡಲಾಗಿರುವ ಆವರಣಕ್ಕೂ ಭೇಟಿ ನೀಡಿ ಪರಿಶೀಲಿಸಿದರು.

Tags: