Mysore
23
haze

Social Media

ಶನಿವಾರ, 13 ಡಿಸೆಂಬರ್ 2025
Light
Dark

ಹುಣಸೂರು | ರೌಡಿಶೀಟರ್‌ಗಳು ಎಚ್ಚರವಹಿಸದಿದ್ದಲ್ಲಿ ಗಡಿಪಾರು ಎಚ್ಚರಿಕೆ

rowdy sheeter

ಹುಣಸೂರು : ಹುಣಸೂರು ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ರೌಡಿ ಶೀಟರ್‌ ಪಟ್ಟಿಯಲ್ಲಿರುವವರನ್ನು ಅಡಿಷನಲ್‌ ಎಸ್‌ಪಿ ಮಲ್ಲಿಕ್‌ ನೇತೃತ್ವದಲ್ಲಿ ಪೆರೆಡ್‌ ನಡೆಸಲಾಯಿತು.

ಹುಣಸೂರು ನಗರದ ಡಿವೈಎಸ್‌ಪಿ ಕಚೇರಿಯಲ್ಲಿ ನಡೆದ ಪೆರೆಡ್‌ನಲ್ಲಿ ಸುಮಾರು 150 ಕ್ಕೂ ಹೆಚ್ಚು ರೌಡಿಗಳು ಭಾಗಿಯಾಗಿದ್ದರು. ಕಾನೂನು ಸುವ್ಯವಸ್ಥೆಗೆ ಭಂಗ ತಂದರೆ ಗಡೀಪಾರು ಮಾಡಲಾಗುವುದು ಎಂದು ಜಿಲ್ಲಾ ಅಡಿಷನಲ್ ಎಸ್ ಪಿ ಮಲ್ಲಿಕ್ ಖಡಕ್ ವಾರ್ನಿಂಗ್ ನೀಡಿದರು.

ಮುಂದಿನ ದಿನಗಳಲ್ಲಿ ಯಾವುದೇ ಅಹಿತಕರ ಘಟನೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ ಅವರು, ಸಮಾಜದಲ್ಲಿ ಶಾಂತಿ ಕದಡುವ ಹಾಗೂ ರೌಡಿ ಚಟುವಟಿಕೆಗಳಲ್ಲಿ ಭಾಗವಹಿಸದೆ ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.

ನಿಮ್ಮ ವರ್ತನೆಯಿಂದ ಕುಟುಂಬಸ್ಥರ ಮೇಲೆ ಪರಿಣಾಮ ಬೀರುತ್ತದೆ ಹೀಗಾಗಿ ಅಂತಹ ಚಟುವಟಿಕೆಗಳಿಂದ ದೂರವಿರಿ ವಯಸ್ಸಾದ ಹಾಗೂ ಉತ್ತಮ ನಡುವಳಿಕೆ ತೋರಿದವರಿಗೆ ರೌಡಿ ಶೀಟರ್ ಗಳಿಂದ ಮುಕ್ತಿ ನೀಡುವ ಬಗ್ಗೆ ಯೂ ಭರವಸೆ ನೀಡಿದರು.

Tags:
error: Content is protected !!