ಮೈಸೂರು: ವರುಣ ಗ್ರಾಮದ ಬಳಿ ರೌಡಿಶೀಟರ್ ಹತ್ಯೆ ನಡೆದ ಬೆನ್ನಲ್ಲೇ ಗ್ರಾಮಾಂತರ ಪ್ರದೇಶದ ಪ್ರಮುಖ ಕಡೆಗಳಲ್ಲಿ ಪೊಲೀಸರು ನಿಗಾ ಇಡಲು ಮುಂದಾಗಿದ್ದು, ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರೌಡಿಗಳ ಪೆರೇಡ್ ನಡೆಯಿತು.
ವೃತ್ತ ನಿರೀಕ್ಷಕ ಡಾ.ಎಂ.ಎಲ್.ಶೇಖರ್ ಕಾನೂನು ಬಾಹಿರ ಕೃತ್ಯದಲ್ಲಿ ಭಾಗಿಯಾಗದಂತೆ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿ, ಯಾವುದೇ ಅಹಿತಕರ ಘಟನೆಗಳಲ್ಲಿ ಭಾಗವಹಿಸದಂತೆ ಖಡಕ್ ವಾರ್ನಿಂಗ್ ನೀಡಿದರು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಭಾಗಿಯಾಗುವುದು, ಮೀಟರ್ ಬಡ್ಡಿ ದಂಧೆ ನಡೆಸುವುದು, ಹಫ್ತಾ ವಸೂಲಿ ಮಾಡುವುದು, ಸಾರ್ವಜನಿಕರಿಗೆ ಭೀತಿ ಹುಟ್ಟಿಸುವಂತಹ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ರೌಡಿಗಳಗೆ ಸೂಚನೆ ನೀಡಿದರು.
ಇದನ್ನೂ ಓದಿ:- ಮೈಸೂರು | ರೌಡಿಶೀಟರ್‌ಗಳಿಗೆ ಪೊಲೀಸರ ಖಡಕ್ ಎಚ್ಚರಿಕೆ
ಒಂದು ವೇಳೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದ್ರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಹಾಗೂ ಅಡಿಷನಲ್ ಎಸ್ಪಿ ಮಲ್ಲಿಕ್ ಸೂಚನೆಯಂತೆ ರೌಡಿಗಳ ಪೆರೇಡ್ ನಡೆಸಲಾಯಿತು. ವಿವಿಧ ಗ್ರಾಮಗಳಲ್ಲಿ ರೌಡಿಶೀಟರ್ ಪಟ್ಟಿಯಲ್ಲಿರುವ 40ಕ್ಕೂ ಹೆಚ್ಚು ರೌಡಿಗಳನ್ನು ರೌಂಡ್ ಅಪ್ ಮಾಡಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವಂತಹ ಚಟುವಟಿಕೆ ನಡೆಸದಂತೆ ವಾರ್ನಿಂಗ್ ಕೊಟ್ಟರು. ಈ ವೇಳೆ ಪಿಎಸ್‌ಐ ಚಂದ್ರು ಹಾಜರಿದ್ದರು.



