ಸಿದ್ದಾಪುರ :- ನಗರದಲ್ಲಿ ನಡೆದ ದರೋಡೆ ಪ್ರಕರಣ ಭೇದಿಸಲು ಜಿಲ್ಲಾ ಹೆಚ್ಚುವರಿ ಪೋಲೀಸ್ ಅಧೀಕ್ಷರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿದೆ ಎಂದು ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಮಾಹಿತಿ ನೀಡಿದ್ದಾರೆ.
ಡಿ. 26ರ ನಸುಕಿನ ಜಾವ ಇಲ್ಲಿನ ಮೖಸೂರು ರಸ್ತೆಯ ನಿವಾಸಿ ಬಿ. ಜಿ. ಚಿನ್ನಪ್ಪನವರ ಮನೆಗೆ ನುಗ್ಗಿದ ಕಳ್ಳ ಅಂದಾಜು 19ಲಕ್ಷ ಮೌಲ್ಯದ ಚಿನ್ನ ಹಾಗೂ ನಗದು ದರೋಡೆ ಮಾಡಿದ್ದು ಪ್ರಕರಣ ನಡೆದು ಒಂದು ದಿನ ಕಳೆದಿದ್ದರು ಯಾವುದೇ ಸುಳಿವು ಲಭ್ಯವಾಗದೆ ಇರುವುದರಿಂದ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದರು.





