ಎಚ್.ಡಿ.ಕೋಟೆ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಯೊಂದು ಕೆಸರು ಗದ್ದೆಯಂತಾಗಿದ್ದು, ವಾಹನ ಸವಾರರು ತೀವ್ರ ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದು ಎಚ್.ಡಿ.ಕೋಟೆ ಪಟ್ಟಣದ ಹೌಸಿಂಗ್ ಬೋರ್ಡ್, ಕೆಂಪಾಲಮ್ಮ ಬಡಾವಣೆ, ರಂಗಯ್ಯಂಗಾರ್ ಬಡಾವಣೆ, ಬೆಳಗನಹಳ್ಳಿ ರಸ್ತೆ, ಸ್ಟೇಡಿಯಂ ಬಡಾವಣೆ, ಹನುಮಂತ ನಗರ ಬಡಾವಣೆಗಳ ರಸ್ತೆಗಳ ದುಸ್ಥಿತಿಯಾಗಿದ್ದು, ರಸ್ತೆ ದಾಟಲು ದಾರಿ ಹೋಕರು ಹಾಗೂ ದ್ವಿಚಕ್ರ ವಾಹನ ಸವಾರರು ತೀವ್ರ ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು ವಯೋವೃದ್ಧರು ತೀವ್ರ ಪರದಾಟ ನಡೆಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ರಸ್ತೆ ಸರಿಪಡಿಸಿ ಎಂದು ಪದೇ ಪದೇ ಆಗ್ರಹಿಸುತ್ತಿದ್ದು, ಕಂಡೂ ಕಾಣದಂತಿರುವ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.





