Mysore
21
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಮೈಸೂರಿನಲ್ಲಿ 250 ಕೋಟಿ ರೂ. ವೆಚ್ಚ: ರಸ್ತೆ ಡಾಂಬರೀಕರಣಕ್ಕೆ ಮರು ಚಾಲನೆ

ಮೈಸೂರು :ಗುಂಡಿಬಿದ್ದ ನಗರದ ರಸ್ತೆಗಳಿಗೆ ಮುಕ್ತಿ ನೀಡುವ ಸಲುವಾಗಿ 250 ಕೋಟಿ ರೂ. ವೆಚ್ಚದ ಡಾಂಬರೀಕರಣಕ್ಕೆ ಮರು ಚಾಲನೆ ನೀಡಲು ಮೈಸೂರು ಮಹಾನಗರಪಾಲಿಕೆ ಮುಂದಾಗಿದೆ.

ಈ ಹಿಂದಿನ ಮೇಯರ್‌ ಸುನಂದಾ ಪಾಲನೇತ್ರ ಅವರು 25 ಕೋಟಿ ರೂ., ಶಾಸಕರಾದ ಎಸ್‌.ಎ. ರಾಮದಾಸ್‌ ಅವರು 150 ಕೋಟಿ ರೂ. ಹಾಗೂ ಎಲ್‌.ನಾಗೇಂದ್ರ ಅವರು 200 ಕೋಟಿ ರೂ. ಅನುದಾನವನ್ನು ರಸ್ತೆ, ಪಾರ್ಕ್, ಯುಜಿಡಿ ಅಭಿವೃದ್ಧಿಗೆ ತಂದಿದ್ದಾರೆ. ಇದರ ಜೊತೆಗೆ ಪಾಲಿಕೆಯ 10 ಕೋಟಿ ರೂ. ಹಾಗೂ 15ನೇ ಹಣಕಾಸಿನ ಯೋಜನೆಯಡಿ ಅನುದಾನವನ್ನು ರಸ್ತೆ ಡಾಂಬರೀಕರಣಕ್ಕೆ ಬಳಸಲಾಗುತ್ತಿದೆ. ಒಟ್ಟಾರೆ ಸದ್ಯ 250 ಕೋಟಿ ರೂ. ವೆಚ್ಚದಲ್ಲಿ ಇನ್ನು ಮೂರು ದಿನದಲ್ಲಿ ಮರು ಡಾಂಬರೀಕರಣಕ್ಕೆ ಚಾಲನೆ ನೀಡಲಾಗುತ್ತದೆ.

ದಸರಾ ಮಹೋತ್ಸವ ಹಾಗೂ ಮಳೆ ಅಡಚಣೆ ಹಿನ್ನೆಲೆಯಲ್ಲಿ ನಗರದ ಹೃದಯ ಭಾಗಕ್ಕಷ್ಟೇ ಡಾಂಬರೀಕರಣ ಮಾಡಲಾಗಿತ್ತು. ಆದರೆ, ಇದೀಗ ದಸರಾ ಮುಗಿದು ಮಳೆಯೂ ಬಿಡುವು ಕೊಟ್ಟಿರುವುದರಿಂದ ವಾರದೊಳಗೆ ನಗರದ ಗುಂಡಿ ಹಾಗೂ ಹಳ್ಳಬಿದ್ದ ರಸ್ತೆಗಳಿಗೆ ಡಾಂಬರೀಕರಣ ಹಾಕಲು ಪಾಲಿಕೆ ನಿರ್ಧರಿಸಿದೆ. ಸೋಮವಾರ (ಅ.10ರಿಂದ) ದಿಂದಲೇ ನಗರಪಾಲಿಕೆ ಮೇಯರ್‌ ಶಿವಕುಮಾರ್‌ ಅವರು ನಗರದಾದ್ಯಂತ ಸ್ಥಳ ಪರಿಶೀಲನೆ ನಡೆಸಿ ಯಾವ ಬಡಾವಣೆಯ ಯಾವ ರಸ್ತೆಗಳಿಗೆ ಡಾಂಬರೀಕರಣ ಅಗತ್ಯವಿದೆ ಎಂಬ ಪಟ್ಟಿ ತಯಾರಿಸಲು ಸಿದ್ಧತೆ ನಡೆಸಿದ್ದಾರೆ. ಈ ಸಂಬಂಧ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ ಅವರೊಂದಿಗೂ ಮಾತುಕತೆ ನಡೆಸಿದ್ದು, ಇನ್ನೆರಡು ತಿಂಗಳಿನಲ್ಲಿ ಗುಂಡಿ ರಸ್ತೆಗಳಿಗೆ ಮುಕ್ತಿ ನೀಡಲು ಕಟಿಬದ್ಧರಾಗಿದ್ದಾರೆ.

ಎಲ್ಲಿಎಷ್ಟು ಅನುದಾನ?
ಈ ಹಿಂದಿನ ಮೇಯರ್‌ ಸುನಂದಾ ಪಾಲನೇತ್ರ ಅವರು 25 ಕೋಟಿ ರೂ., ಶಾಸಕರಾದ ಎಸ್‌.ಎ. ರಾಮದಾಸ್‌ ಅವರು 150 ಕೋಟಿ ರೂ. ಹಾಗೂ ಎಲ್‌.ನಾಗೇಂದ್ರ ಅವರು 200 ಕೋಟಿ ರೂ. ಅನುದಾನವನ್ನು ರಸ್ತೆ, ಪಾರ್ಕ್, ಯುಜಿಡಿ ಅಭಿವೃದ್ಧಿಗೆ ತಂದಿದ್ದಾರೆ. ಇದರ ಜೊತೆಗೆ ಪಾಲಿಕೆಯ 10 ಕೋಟಿ ರೂ. ಹಾಗೂ 15ನೇ ಹಣಕಾಸಿನ ಯೋಜನೆಯಡಿ ಅನುದಾನವನ್ನು ರಸ್ತೆ ಡಾಂಬರೀಕರಣಕ್ಕೆ ಬಳಸಲಾಗುತ್ತಿದೆ. ಒಟ್ಟಾರೆ ಸದ್ಯ 250 ಕೋಟಿ ರೂ. ವೆಚ್ಚದಲ್ಲಿ ಇನ್ನು ಮೂರು ದಿನದಲ್ಲಿ ಮರು ಡಾಂಬರೀಕರಣಕ್ಕೆ ಚಾಲನೆ ನೀಡಲಾಗುತ್ತದೆ. ಟೆಂಡರ್‌ ಹಂತದಲ್ಲಿರುವ ರಸ್ತೆ ಕಾಮಗಾರಿಯನ್ನೂ ಬೇಗ ಮುಗಿಸಲು ಪಾಲಿಕೆ ಚಿಂತನೆ ನಡೆಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ