Mysore
20
overcast clouds
Light
Dark

ಪೊಲೀಸ್ ಧ್ವಜ ದಿನಾಚರಣೆಯಲ್ಲಿ ನಿವೃತ್ತ ಕಮಾಂಡೆಂಟ್ ಶಿವರಾಜ್ ಬಣ್ಣನೆ

ಮೈಸೂರು: ಪೊಲೀಸ್ ಇಲಾಖೆುಂ ಕೆಲಸವೆಂದರೆ ಕಾಲಮಿತಿಯಲ್ಲಿ ನಿರ್ವಹಿಸುವಂತಹ ಕೆಲಸವಲ್ಲ. ನಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಮಾಡುವಂತಹ ವೃತ್ತಿಯಾಗಿದೆ ಎಂದು ನಿವೃತ್ತ ಕವಾಂಡೆಂಟ್ ಶಿವರಾಜ್ ತಿಳಿಸಿದರು.

ನಜರ್‌ಬಾದ್‌ನಲ್ಲಿರುವ ಸಿಎಆರ್ ಮೈದಾನದಲ್ಲಿ ಮಂಗಳವಾರ ನಗರ ಪೊಲೀಸ್, ಅಶ್ವಾರೋಹಿ ದಳ, ಕರ್ನಾಟಕ ಪೊಲೀಸ್ ಅಕಾಡೆಮಿ, ಪೊಲೀಸ್ ತರಬೇತಿ ಶಾಲೆ, ರಾಜ್ಯಗುಪ್ತವಾರ್ತೆ, ಲೋಕಾಯುಕ್ತ, ಸೆಸ್ಕ್, ಐಎಸ್‌ಡಿ, ಕೆಎಸ್‌ಆರ್‌ಪಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾಂರ್ುಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ವಾತನಾಡಿದರು.

ಕಾನೂನು ಸುವ್ಯವಸ್ಥೆ ಕಾಪಾಡುವ ಸಂದರ್ಭದಲ್ಲಿ ಸವಾಜಘಾತುಕರ ಜೊತೆ ಹೋರಾಟ ವಾಡುವಾಗ ಹಲವಾರು ಅಧಿಕಾರಿ ಮತ್ತು ಸಿಬ್ಬಂದಿಯವರು ತಮ್ಮ ಪ್ರಾಣವನ್ನೇ ಪಣವಾಗಿಟ್ಟಿರುವ ಹಲವಾರು ಉದಾಹರಣೆಗಳು ನಮ್ಮ ಮುಂದೆ ಇವೆ. ಇಂತಹ ಅಧಿಕಾರಿ ಮತ್ತು ಸಿಬ್ಬಂದಿ ಸೇವೆುಂನ್ನು ನೆನೆಯುವ ಸಲುವಾಗಿ ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಿ ನಮ್ಮಂತಹ ನಿವೃತ್ತರನ್ನು ಗೌರವಿಸುವ ಕೆಲಸ ವಾಡುತ್ತಿರುವುದು ಶ್ಲಾಘನೀಯ ಎಂದರು.

ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಮೂಲಕ ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿುಂವರ ಬೇಡಿಕೆಗಳನ್ನು ನೆರವೇರಿಸುತ್ತಾ ಬಂದಿದ್ದು, ಆರೋಗ್ಯ ಭಾಗ್ಯದಂತಹ ಸೌಲಭ್ಯಗಳನ್ನು ಒದಗಿಸಿದೆ. ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳು ಹೆಚ್ಚು ಹೆಚ್ಚು ಧ್ವಜಗಳನ್ನು ವಾರಾಟ ವಾಡುವುದರ ಮೂಲಕ ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣಕ್ಕೆ ಸಹಾುಂ ವಾಡಬೇಕು ಎಂದು ಮನವಿ ವಾಡಿದ ಅವರು, ಪೊಲೀಸ್ ಧ್ವಜವನ್ನು ಬಿಡುಗಡೆಗೊಳಿಸಿದರು.

ದಕ್ಷಿಣ ವಲಯದ ಡಿಐಜಿ ಅಮಿತ್ ಸಿಂಗ್, ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸೀವಾ ಲಾಟ್ಕರ್, ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ಲೋಕೇಶ್, ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಗೀತಾ, ಡಿಸಿಪಿ ಮುತ್ತುರಾಜ್, ಜಾಹ್ನವಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ನಂದಿನಿ, ಪೊಲೀಸ್ ಅಕಾಡೆಮಿ ಉಪ ನಿರ್ದೇಶಕ ನಿರಂಜನ್‌ರಾಜ್ ಅರಸ್, ಕೆಎಸ್‌ಆರ್‌ಪಿ ೫ನೇ ಪಡೆುಂ ಕವಾಂಡೆಂಟ್ ದೊರೆಮಣಿ ಭೀಮ್ಂಯು, ಸಿಎಆರ್ ಡಿಸಿಪಿ ಎ.ವಾರುತಿ, ಕೆಎಸ್‌ಆರ್‌ಪಿ ಮೌಂಟೆಡ್ ಕವಾಂಡೆಂಟ್ ಶೈಲೇಂದ್ರ ಮುಂತಾದವರು ಹಾಜರಿದ್ದರು.

ಇದಕ್ಕೂ ಮುನ್ನ ಸಿಎಆರ್ ಮೈದಾನದಲ್ಲಿ ಪರೇಡ್ ಕವಾಂಡೆಂಟ್ ಕೆ.ಎನ್.ಸುರೇಶ್, ಸಹಾುಂಕ ಕವಾಂಡೆಂಟ್ ಎಸ್.ಡಿ.ಸಾಸನೂರ್ ನೇತೃತ್ವದಲ್ಲಿ ನಗರ ಪೊಲೀಸರಿಂದ ಆಕರ್ಷಕ ಪಥ ಸಂಚಲನ ನಡೆಯಿತು. ನಿವೃತ್ತ ಎಸ್‌ಐ ಮಂಜುನಾಥ್ ಹಾಗೂ ಕೆಪಿಎ ಸಿಬ್ಬಂದಿ ಎ.ನಂದಿನಿ ನಿರೂಪಣೆ ವಾಡಿದರು.