Mysore
19
scattered clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಏ.23 ರಂದು ಕೋಮುವಾದ ಧಿಕ್ಕರಿಸಿ; ಸಂವಿಧಾನ ರಕ್ಷಿಸಿ ಜನಾಕ್ರಾಂತಿ ಸಮಾವೇಶ

ಮೈಸೂರು: ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಏ.೨೩ರಂದು ಬೆಳಿಗ್ಗೆ ೧೧ಕ್ಕೆ ಬೆಂಗಳೂರಿನ ವಸಂತ ನಗರದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ‘ಕೋಮುವಾದ ಧಿಕ್ಕರಿಸಿ-ಸಂವಿಧಾನ ರಕ್ಷಿಸಿ’ ಶೀರ್ಷಿಕೆಯಡಿ ದಲಿತರ ಅಭಿವೃದ್ಧಿಗಾಗಿ ಜನಕ್ರಾಂತಿ ಸಮಾವೇಶ ಆಯೋಜಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ಸಂಚಾಲಕ ಉಗ್ರಪ್ಪ ತಿಳಿಸಿದರು.

ಸಮಿತಿಯ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಅವರು ಸಮಾವೇಶದ ನೇತೃತ್ವ ವಹಿಸುವರು. ಈ ವೇಳೆ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಪ.ಜಾತಿಯ ಎಲ್ಲ ಉಪ ಜಾತಿಗಳಿಗೆ ಒಳ ಮೀಸಲಾತಿಯನ್ನು ಎಲ್.ಜಿ. ಹಾವನೂರು ವರದಿ, ಎ.ಜೆ. ಸದಾಶಿವ ಆಯೋಗದ ವರದಿ, ಸಿ.ಜೆ. ಮಾಧುಸ್ವಾಮಿಯವರ ಶಿಫಾರಸುಗಳಲ್ಲಿ ಯಾವುದಾದರೂ ಒಂದನ್ನು ಆಧರಿಸಿ ಜಾರಿಗೆ ತರಬೇಕು ಹಾಗೂ ಇನ್ನಿತರ ಹಕ್ಕೊತ್ತಾಯಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಗೋಪಾಲಕೃಷ್ಣಸ್ವಾಮಿ, ಆರ್. ಮಹೇಶ್, ರಾಚಪ್ಪ ಜಟ್ಟಿಹುಂಡಿ, ಎಂ.ಎಂ.ಮಲ್ಲೇಶ್, ತಾಲ್ಲೂಕು ಸಂಚಾಲಕ ಶಿವಪ್ಪ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Tags:
error: Content is protected !!