Mysore
26
scattered clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ರಥಸಪ್ತಮಿ ಆಚರಣೆ: ಅಂಬಾವಿಲಾಸ ಅರಮನೆಯಲ್ಲಿ ವಿಶೇಷ ಪೂಜೆ

ಮೈಸೂರು: ಇಲ್ಲಿನ ಅಂಬಾವಿಲಾಸ ಅರಮನೆಯಲ್ಲಿ ರಥಸಪ್ತಮಿ ಆಚರಣೆ ಹಿನ್ನೆಲೆ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆ ಮಾಡಲಾಗಿದೆ.

ಸಾಂಸ್ಕೃತಿಕ ನಗರಿಯಲ್ಲಿ ಇಂದು(ಫೆಬ್ರವರಿ.5) ರಥಸ್ತಪಮಿ ಪ್ರಯುಕ್ತ ನಗರದ್ಯಾಂತದ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತಿದೆ. ಅಂತೆಯೇ ಅಂಬಾವಿಲಾಸ ಅರಮನೆಯಲ್ಲಿಯೂ ಕೂಡ ಅಲ್ಲಿನ ದೇವಾಲಯಗಳ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇನ್ನೂ ಅಂಬಾವಿಲಾಸ ಅರಮನೆ ಅಂಗಳದಲ್ಲಿ ಅದ್ದೂರಿಯಾಗಿ ನಡೆದ ಭವ್ಯ ಮೆರವಣಿಗೆಯಲ್ಲಿ ಉತ್ಸವ ಮೂರ್ತಿಗಳ ದರ್ಶನವನ್ನು ಸಾರ್ವಜನಿಕರು ಪಡೆದಿದ್ದಾರೆ.

ರಥಸಪ್ತಮಿಯ ಹಿನ್ನೆಲೆ ಏನು?

ಇಡೀ ಜಗತ್ತಿಗೆ ಬೆಳಕು ಕೊಡುವವನು ಸೂರ್ಯ. ಅನೇಕ ಮಂದಿ ಪ್ರತಿನಿತ್ಯ ಬೆಳಿಗ್ಗೆ ಸೂರ್ಯನಿಗೆ ನಮಸ್ಕರಿಸಿ ಅರ್ಘ್ಯ ನೀಡುತ್ತಾರೆ. ಜಗತ್ತಿಗೆ ಬೆಳಕು ನೀಡುವ ಸೂರ್ಯದೇವನನ್ನು ರಥಸಪ್ತಮಿಯಂದು ವಿಶೇಷವಾಗಿ ಪೂಜಿಸಲಾಗುತ್ತದೆ. ಮಾಘ ಮಾಸ ಶುಕ್ಲ ಪಕ್ಷದ ಸಪ್ತಮಿಯ ದಿನವನ್ನು ರಥ ಸಪ್ತಮಿಯಾಗಿ ಆಚರಿಸಲಾಗುತ್ತದೆ. ಇದನ್ನು ಸೂರ್ಯ ಜಯಂತಿ ಮತ್ತು ಅಚಲಾ ಸಪ್ತಮಿ ಎಂದು ಕರೆಯಲಾಗುತ್ತದೆ. ಈ ದಿನ ಸೂರ್ಯ ದೇವನಿಗೆ ಅರ್ಘ್ಯವನ್ನು ನೀಡಿ ಪೂಜಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ರಥ ಸಪ್ತಮಿಯ ದಿನದಂದು ಸೂರ್ಯನ ಆರಾಧನೆ ಮಾಡಿದರೆ ಆಯುಷ್ಯ, ಸಂಪತ್ತಿನ ವೃದ್ಧಿಯಾಗುತ್ತದೆ ಹಾಗೂ ಮನುಷ್ಯನ ಎಲ್ಲ ಪಾಪಗಳಿಗೂ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ.

ಧಾರ್ಮಿಕ ನಂಬಿಕೆಗಳ ಪ್ರಕಾರ ಮಾಘ ಮಾಸದ ಶುಕ್ಲ ಪಕ್ಷದ ಏಳನೇ ದಿನದಂದು ಸೂರ್ಯ ದೇವರು ತನ್ನ ರಥದ ಮೇಲೆ ಸವಾರಿ ಮಾಡಿ ಜಗತ್ತಿಗೆ ಬೆಳಕು ನೀಡಲು ಪ್ರಾರಂಭಿಸಿದ. ಈ ಕಾರಣಕ್ಕಾಗಿಯೇ ಈ ದಿನವನ್ನು ಸೂರ್ಯ ಜಯಂತಿ ಎಂದು ಹೇಳಲಾಗುತ್ತದೆ. ರಥ ಸಪ್ತಮಿಯ ದಿನ ಸೂರ್ಯ ದೇವನ ಜನ್ಮದಿನ ಎಂಬ ಪ್ರತೀತಿ ಇದೆ. ರಥ ಸಪ್ತಮಿಯ ದಿನ ಸೂರ್ಯನ ಪೂಜೆ ಮಾಡಿದರೆ ಜೀವನದ ಕಷ್ಟಗಳು ನಿವಾರಣೆಯಾಗುತ್ತವೆ. ಅಂದಿನ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡಿ ಅರ್ಘ್ಯ ನೀಡುವುದರಿಂದ ಜಾತಕದಲ್ಲಿನ ದೋಷಗಳು ಹಾಗೂ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ ಎಂಬ ಭಾವನೆ ಇದೆ.

Tags:
error: Content is protected !!