ಮೈಸೂರು: ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರ ಮೆಗಾ ಪವರ್‌ಸ್ಟಾರ್ ರಾಮ್‌ಚರಣ್ ಮೈಸೂರಿಗೆ ಬಂದಿಳಿದಿದ್ದಾರೆ. ಆರ್‌ಆರ್‌ಆರ್ ಚಿತ್ರದ ಯಶಸ್ಸಿನ ಬಳಿಕ ನಿರ್ದೇಶಕ ಶಂಕರ್‌ರವರ ಚಿತ್ರ ಗೇಮ್ ಚೇಂಜರ್ ಚಿತ್ರದ ಚಿತ್ರೀಕರಣದಲ್ಲಿ ರಾಮ್‌ಚರಣ ತೊಡಗಿಕೊಂಡಿದ್ದಾರೆ.
ಚಿತ್ರೀಕರಣ ಭರದಿಂದ ಸಾಗಿದ್ದು, ಸದ್ಯ ಚಿತ್ರತಂಡ ಮೈಸೂರಿನಲ್ಲಿ ಬೀಡುಬಿಟ್ಟಿದೆ. ರಾಮ್‌ಚರಣ್ ಮತ್ತು ಕಿಯಾರ ಅಡ್ವಾಣಿ ನಟಿಸುತ್ತಿರುವ ಗೇಮ್ ಚೇಂಜರ್ ಚಿತ್ರದ ಚಿತ್ರೀಕರಣ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ನಡೆಯುತ್ತಿದೆ. ಇನ್ನು ಎರಡು-ಮೂರು ದಿನ ಮೈಸೂರಿನ ವಿವಿಧೆಡೆ ಚಿತ್ರೀಕರಣ ನಡೆಯಲಿದೆ.