ಮೈಸೂರು: ಕಳೆದ ಶುಕ್ರವಾರ(ಮೇ.3) ನಗರದಲ್ಲಿ ಬಿರುಗಾಳಿ ಮಳೆಗೆ ಧರೆಗುರುಳಿದ್ದ ನೂರಾರು ಮರಗಳ ತೆರವು ಕಾರ್ಯಚರಣೆಯೇ ಪಾಲಿಕೆಗೆ ಸವಾಲಾಗಿ ಪರಿಣಮಿಸಿದೆ.
ನಗರದ ವಿವಿಧೆಡೆ ಮಳೆಗೆ ಬಿದ್ದ ಮರ ಹಾಗೂ ಮರಗಳ ರೆಂಬೆ, ಕೊಂಬೆಗಳನ್ನು ಮೈಸೂರು ಮಹಾನಗರ ಪಾಲಿಕೆ ಸಿಬ್ಬಂದಿ ಕಳೆದ ಆರು ದಿನಗಳಿಂದ ಮರಗಳ ತೆರವು ಕಾರ್ಯಚರಣೆ ನಡೆಸುತ್ತಿದೆ. ಕಾಳಿದಾಸ ರಸ್ತೆ, ಒಂಟಿಕೊಪ್ಪಲ್ ರಸ್ತೆ, ಟಿಕೆ ಲೇಔಟ್, ಕುವೆಂಪು ನಗರ, ಪೋಲಿಸ್ ಕಮಿಷನರ್ ಕಚೇರಿ ಸೇರಿದಂತೆ ಹಲವು ಭಾಗಗಳಲ್ಲಿ ಇಂದು ಮರಗಳ ತೆರವು ಕಾರ್ಯಚರಣೆಯನ್ನು ಚುರುಕುಗೊಳಿಸಲಾಗಿದೆ.
ಮಹಾನಗರ ಪಾಲಿಕೆ ಸಿಬ್ಬಂದಿ ನಗರದ ಹಲವೆಡೆ ದಾರಿಯುದ್ದಕ್ಕೂ ಮುರಿದು ರಸ್ತೆಗೆ ಅಡ್ಡಲಾಗಿ ಬಿದ್ದಿರುವ ರೆಂಬೆ ಕೊಂಬೆಗಳು ಸೇರಿದಂತೆ ಮುನ್ನೆಚ್ಚರಿಕೆಯಾಗಿ ಒಣಗಿದ ರೆಂಬೆ ಕೊಂಬೆಗಳನ್ನೂ ಸಹ ತೆರವುಗೊಳಿಸುತ್ತಿದ್ದಾರೆ.
ಹವಮಾನ ಇಲಾಖೆಯು ಬುಧುವಾರ(ಮೇ.೮) ಬಿರುಗಾಳಿ ಸಹಿತ ಮಳೇ ಬೀಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಈ ಹಿನ್ನೆಲೆ ಎಚ್ಚೆತ್ತಾ ಪಾಲಿಕೆ ಸಿಬ್ಬಂದಿ ಮರಗಳ ಟ್ರಿಮ್ ಮತ್ತು ಬೀಳುವಂತ ಮರಗಳು ಹಾಗೂ ಒಣಗಿದ ಮರಗಳ ತೆರವು ಮಾಡಲು ಮುಂದಾಗಿದ್ದಾರೆ.