ಮೈಸೂರು : ದೇಶದ ವಿವಿಧ ರಾಜ್ಯಗಳಿಂದ ಕರ್ನಾಟಕಕ್ಕೆ ಕೆಲಸ ಮಾಡಲು ಬಂದು ಹಲವಾರು ವರ್ಷವಾಗಿದರೂ ಏಕೆ ನೀವು ಕನ್ನಡ ಕಲಿತಿಲ್ಲ. ಆದಷ್ಟೂ ಬೇಗ ಕನ್ನಡ ಕಲ್ಲಿತುಕೊಳ್ಳಿ ಎಂದು ರೈಲ್ವೆ ಅಧಿಕಾರಿಗಳನ್ನು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ತರಾಟೆಗೆ ತೆಗೆದುಕೊಂಡರು.
ಮೈಸೂರಿನ ರೈಲ್ವೆ ಡಿಆರ್‌ಎಂ ಕಚೇರಿಯಲ್ಲಿ ಮೈಸೂರು ವಿಭಾಗೀಯ ರೈಲ್ವೆ ಪ್ರಬಂಧಕರು ಹಾಗೂ ಇತರ ಅಧಿಕಾರಿಗಳೊಂದಿಗೆ ವಿಮರ್ಶಾ ಸಭೆ ನಡೆಸಿ ಮೈಸೂರಿನ ವಿಭಾಗೀಯ ಮಟ್ಟದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ವೇಳೆ ಅಧಿಕಾರಿಗಳು ಹಿಂದಿಯಲ್ಲೆ ಮಾಹಿತಿ ನೀಡಿದರು. ಆವಾಗ ಸಚಿವರು ಪ್ರತಿಕ್ರಿಯಿಸಿ, ನಾನು ಮೂರು ತಿಂಗಳಿನಲ್ಲಿ ಹಿಂದಿ ಕಲಿತುಕೊಂಡು ಎಲ್ಲಾ ಕಡೆ ಹಿಂದಿಯಲ್ಲಿ ಮಾತನಾಡುತ್ತಿದ್ದೇನೆ. ಆದರೆ, ನೀವು ಹಲವಾರು ವರ್ಷಗಳಿಂದ ಕರ್ನಾಟಕ ರಾಜ್ಯದಲ್ಲೇ ಕೆಲಸ ನಿರ್ವಹಿಸುತ್ತಿದ್ದಿರಿ, ಆದರೆ ಕನ್ನಡ ಕಲಿತಿಲ್ಲ ಎಂದು ಗರಂ ಆದರು. ಮುಂದೆ ಆದರು ಕನ್ನಡ ಕಲಿತುಕೊಳ್ಳಿ ಕನ್ನಡ ಕಲಿತುಕೊಂಡರೆ ಒಳಿತು ಎಂದು ಕನ್ನಡದ ಪ್ರೀತಿ ತೋರಿದರು.
ಇಲಾಖೆಗೆ ಯಾರು ಅನಿವಾರ್ಯವಲ್ಲ
ರೈಲ್ವೇ ಇಲಾಖೆಗೆ ಯಾರು ಅನಿವಾರ್ಯವಲ್ಲ. ಆದರೆ ರೈಲ್ವೇ ಇಲಾಖೆ ಎಲ್ಲರಿಗೂ ಅನಿವಾರ್ಯ. ನಿಮ್ಮೊಂದಿಗೆ ಯಾರೇ ಮಾತನಾಡಿದರು ಸೌಜನ್ಯದಿಂದ ವರ್ತಿಸಿ, ಗೌರವಕೊಟ್ಟು ಮಾತನಾಡಿ ಎಂದು ಸಲಹೆ ನೀಡಿ, ಅಧಿಕಾರಿಯೊಬ್ಬರಿಗೆ ತರಾಟೆ ತೆಗೆದುಕೊಂಡರು. ನೀವು ತಪ್ಪು ಮಾಡಿದರೆ, ಹುಬ್ಬಳಿ ಅಲ್ಲ ಕಾಶ್ಮೀರಕ್ಕೆ ಕಳುಹಿಸುತ್ತೇನೆ ಎಂದು ಸಹ ಎಚ್ಚರಿಸಿದರು.
ಜೂ.೬ರಂದು ವಿಶ್ವದ ಭೂಪಟದಲ್ಲಿ ಭಾತರದ ಅಭಿವೃದ್ದಿಯ ಸಂಕೇತವಾಗಿ ಕಾಶ್ಮೀರದಿಂದ ಕನ್ಯಾಕುಮಾರಿಗೆ ರೈಲನ್ನು ಚಾಲನೆ ಮಾಡುವ ಕನಸನ್ನು ಪ್ರಧಾನ ಮಂತ್ರಿಗಳು ರೈಲ್ವೆ ಮಂತ್ರಿಗಳು ಲೋಕಾರ್ಪಣೆ ಮಾಡಿದ್ದಾರೆ. ಇದು ಒಂದು ಐತಿಹಾಸಿಕ ದಿನವಾಗಿದ್ದು, ಚೈನ ಬ್ರಿಡ್ಜ್‌ಗೂ ಸಾಕಷ್ಟು ವ್ಯತ್ಯಾಸವಿದೆ. ಒಮ್ಮೆ ಭೇಟಿ ನೀಡಿ ಎಂದರು.





