ಮೈಸೂರು: ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಶಾಸಕ ಮುನಿರತ್ನ ಅವರು ಎಚ್‌ಐವಿ ಇಂಜೆಕ್ಷನ್ ನೀಡಿರಬಹುದು. ಹಾಗಾಗಿ ಅವರು ಒಮ್ಮೆ ಆರೋಗ್ಯ ಪರೀಕ್ಷಿಸಿಕೊಂಡರೆ ಒಳ್ಳೆಯದು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು(ಮಾರ್ಚ್.25) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಶಾಸಕ ಮುನಿರತ್ನ ಅವರು ಅನೇಕರಿಗೆ ಎಚ್ಐವಿ ಇಂಜೆಕ್ಷನ್ ನೀಡುವ ವ್ಯಕ್ತಿ. ಯಾವುದೋ ಹೆಣ್ಣು ಮಗಳ ಮೂಲಕ ಅಶೋಕ್‌ರಿಗೆ ಎಚ್‌ಐವಿ ಇಂಜೆಕ್ಷನ್ ಮಾಡಿರಬೇಕು. ಹೀಗಾಗಿ ಯಾವುದಕ್ಕೂ ಅವರು ಒಮ್ಮೆ ಆರೋಗ್ಯ ಪರೀಕ್ಷಿಸಿಕೊಂಡರೆ ಒಳ್ಳೆಯದು. ಏಕೆಂದರೆ ಅವರ ತುಟಿಯ ಬಣ್ಣ ಬದಲಾಗುತ್ತಿದ್ದು, ಕೈ ಬಣ್ಣ ಬಿಳಿ ಬಣ್ಣಕ್ಕೆ ತಿರುಗಿದೆ. ಆದ್ದರಿಂದ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳೇಕು ವ್ಯಂಗ್ಯ ಮಾಡಿದರು.
ಇನ್ನು ನನಗಿರುವ ಮಾಹಿತಿ ಪ್ರಕಾರ ಮುನಿರತ್ನ ಬಳಿ ಸುಮಾರು 200 ಸಿಡಿಗಳು ಇರಬಹುದು. ಈ ಪೈಕಿ ಬಿಜೆಪಿಯ 15 ಮಂದಿ ನಾಯಕರ ಸಿಡಿಗಳಿರಬಹುದು. ಸಿಡಿಯ ಮಹಾನಾಯಕ ಶಾಸಕ ಮುನಿರತ್ನ ಆಗಿದ್ದಾನೆ ಎಂದು ಹೇಳಿದರು.





