Mysore
21
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಅಪ್ಪು ‘ಗಂಧದ ಗುಡಿ’ ಸಿನಿಮಾ ನೋಡಲು ಜನಸಾಗರ.

ಮೈಸೂರು ; ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕಟ್ಟ ಕಡೆಯ ಸಿನಿಮಾ ಗಂಧದಗುಡಿಗೆ ಕೋಟೆನಾಡಿನಲ್ಲಿ ಅದ್ದೂರಿ ವೆಲ್ಕಮ್ ಸಿಕ್ಕಿದೆ. ಮೈಸೂರಿನ ಪದ್ಮ ಚಿತ್ರಮಂದಿರದಲ್ಲಿ ತೆರೆಕಂಡ ಸಿನಿಮಾದ ಮೊದಲ ಪ್ರದರ್ಶನ ಬೆಳಗ್ಗೆ 7ಗಂಟೆಗೆ ಶುರುವಾಗಿದ್ದು ಅಪ್ಪು ಫ್ಯಾನ್ಸ್ ಸಾಗರೋಪಾದಿಯಲ್ಲಿ ಆಗಮಿಸಿ ಅಪ್ಪುವಿನ ಸುಂದರ ಕ್ಷಣಗಳನ್ನು ಕಣ್ತುಂಬಿಕೊಂಡರು.

ಸಿನಿಮಾ ರಿಲೀಸ್ ಮುನ್ನವೇ ಪುನೀತ್ ಕಟೌಟ್ಗಳು ಎಲ್ಲರ ಗಮನ ಸೆಳೆದವು. ಥಿಯೇಟರ್ ಬಳಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಂತೆ ತಮಟೆ, ಡೊಳ್ಳು ಬಾರಿಸುವ ಮೂಲಕ ನೆರೆದಿದ್ದ ಪ್ರೇಕ್ಷಕರಿಗೆ ರಂಜಿಸಿದರು.

ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ, ಪುನೀತ್ ಕಿರಿಯ ಪುತ್ರಿ ವಂದಿತಾ, ಯುವರಾಜ್‌ಕುಮಾರ್, ರಮ್ಯಾ, ನೆನಪಿರಲಿ ಪ್ರೇಮ್, ದೇವರಾಜ್, ನಿಶ್ವಿಕಾ ನಾಯ್ಡು, ಸುಧಾ ಬೆಳವಾಡಿ, ಗುರುಕಿರಣ್, ಅಜಯ್ ರಾವ್, ವಿನಯ್ ರಾಜ್‌ಕುಮಾರ್, ಸುಧಾ ಮೂರ್ತಿ, ‘ಬಹದ್ದೂರ್’ ಚೇತನ್, ಅಭಿಷೇಕ್ ಅಂಬರೀಶ್, ಪ್ರಜ್ವಲ್ ದೇವರಾಜ್, ಸಂತೋಷ್ ಆನಂದ್ರಾಮ್, ವಿಜಯ್ ರಾಘವೇಂದ್ರ, ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ, ರಕ್ಷಿತ್ ಶೆಟ್ಟಿ ಮುಂತಾದವರು ಪ್ರೀಮಿಯರ್ ಶೋನಲ್ಲಿ ‘ಗಂಧದ ಗುಡಿ’ ಸಾಕ್ಷ್ಯಚಿತ್ರವನ್ನು ಕಣ್ತುಂಬಿಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ