ಸರಗೂರು : ಈ ಹಿಂದೆ ನೇರಳೆ-ಮಾಗುಡಿಲು ಗ್ರಾಮಕ್ಕೆ ನೇರವಾಗಿ ಕೆಎಸ್‌ಆರ್‌ಟಿಸಿ ಬಸ್ ಸೇವೆ ಇತ್ತು. ಈಗ ಆ ಬಸ್ ನೇರಳೆಗೆ ಬರುತ್ತಿಲ್ಲ ಎಂಬ ದೂರು ಗ್ರಾಮಸ್ಥರಿಂದ ಕೇಳಿಬಂದಿದೆ.
ಶಾಲೆ, ಕಾಲೇಜು, ಆಸ್ಪತ್ರೆ ಸೇರಿದಂತೆ ದೈನಂದಿನ ಕೆಲಸಗಳಿಗೆ ಗ್ರಾಮಸ್ಥರು ಬೀಚನಳ್ಳಿಯ ಗಣೇಶಗುಡಿ ಬಳಿ ಬಂದು ಹ್ಯಾಂಡ್‌ಪೋಸ್ಟ್ ಮೂಲಕ ಸರಗೂರಿಗೆ ಹೋಗಬೇಕಾಗಿದೆ. ಈ ಮಾರ್ಗ 17 ಕಿಲೋಮೀಟರ್ ದೂರವಾಗುತ್ತಿದೆ. ಆದರೆ ನೇರಳೆ-ಮಾಗುಡಿಲು-ನೀಲವಾಗಿಲು-ತುಂಬಸೋಗೆ ಮಾರ್ಗವು ಕೇವಲ 6 ಕಿಲೋಮೀಟರ್ ಮಾತ್ರವಾಗಿದೆ. ಹೀಗಾಗಿ ನೇರಳೆ-ಮಾಗುಡಿಲು ಗ್ರಾಮಕ್ಕೆ ನೇರ ಬಸ್ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮಕ್ಕೆ ನೇರ ಬಸ್ ಸೇವೆಯನ್ನು ಪುನಃಸ್ಥಾಪಿಸಬೇಕು. ಇಲ್ಲವಾದರೆ ವಿದ್ಯಾರ್ಥಿಗಳು ಮತ್ತು ರೋಗಿಗಳು ತೊಂದರೆಗೀಡಾಗುತ್ತಾರೆ ಎಂದು ಗ್ರಾಮಸ್ಥ ಶಿವಕುಮಾರ್ ಹೇಳಿದ್ದಾರೆ.





