Mysore
27
broken clouds

Social Media

ಬುಧವಾರ, 15 ಜನವರಿ 2025
Light
Dark

 ಮೈಸೂರು ದಸರಾ ಸೊಬಗನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ

ಮೈಸೂರು: ಮೈಸೂರು ದಸರಾ ಬುಧವಾರವಷ್ಟೇ ತಾರ್ಕಿಕ ಅಂತ್ಯ ಕಂಡಿದೆ. ಬುಧವಾರ  ಸಂಜೆ ನಡೆದ ಜಂಬೂ ಸವಾರಿ, ಮತ್ತು  ಪಂಜಿನ ಕವಾಯತು ಕಾರ್ಯಕ್ರಮಗಳ ನಂತರ ಈ ಬಾರಿಯ ದಸರಾಕ್ಕೆ ವಿದಾಯ ಹೇಳಲಾಗಿದೆ. ಈ ಬಾರಿಯ ದಸರೆಯ ಸೊಬಗನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಕೊಂಡಾಡಿದ್ದಾರೆ.

ಈ ಬಾರಿಯ ಮೈಸೂರು ದಸರಾ ಅದ್ಭುತವಾಗಿತ್ತು. ತಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಇನ್ನೂ ಉಳಿಸಿಕೊಂಡು ಬಂದಿರುವ ಮೈಸೂರು ಜನತೆಯನ್ನು ನಾನು ಶ್ಲಾಘಿಸುತ್ತೇನೆ. ಈ ಬಾರಿಯ ಯೋಗ ದಿನದಂದು ನಾನು ಮೈಸೂರಿಗೆ ಭೇಟಿ ನೀಡಿದ್ದೆ. ಮೈಸೂರಿನ ಜನರೊಂದಿಗೆ ಬೆರೆಯುವ ಅವಕಾಶ ನನಗೆ ಒದಗಿತ್ತು ಎಂದು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ಕರ್ನಾಟಕದ ಹೊಸನಗರದವರಾದ ನಿವಾನೆ ಕಲಾನಾಥ್ ಭಟ್ ಎಂಬ ಆರ್ ಎಸ್ಎಸ್ ಸ್ವಯಂಸೇವಕರು ಈ ಬಾರಿಯ ಜಂಬೂಸವಾರಿಗೆ ಸಿಎಂ ಬೊಮ್ಮಾಯಿ ಪುಷ್ಪಾರ್ಚನೆ ಮಾಡುತ್ತಿರುವುದು ಹಾಗೂ ಜಂಬೂ ಸವಾರಿಯು ಜನಸಮೂಹದ ನಡುವೆ ಸಾಗುತ್ತಿರುವ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ಫೋಟೋಗಳನ್ನು ನೋಡಿ ಮೆಚ್ಚಿಕೊಂಡಿರುವ ಪ್ರಧಾನಿ ಮೋದಿ, ಜಂಬೂ ಸವಾರಿಯನ್ನು ಮನಸಾರೆ ಶ್ಲಾಘಿಸಿದ್ದಾರೆ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ