Mysore
25
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ದಸರಾ ತಾಲೀಮಿಗೆ ಮುಂಚೆ ಹೆಣ್ಣಾನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್

ಮೈಸೂರು : ನಾಡಹಬ್ಬ ದಸರಾ ಮಹೋತ್ಸವಕ್ಕೆ ತಯಾರಿ ಶುರುವಾಗಿದೆ. 2023ನೇ ಸಾಲಿನ ಮೈಸೂರು ದಸರಾ ಹಬ್ಬ ಅಕ್ಟೋಬರ್​ನಲ್ಲಿ ನಡೆಯಲಿದೆ. ಹೀಗಾಗಿ ವಿಶ್ವ ವಿಖ್ಯಾತ ಹಬ್ಬಕ್ಕೆ ತಯಾರಿ ಆರಂಭವಾಗಿದೆ. ದಸರಾಗೆ ಬರುವ ಹೆಣ್ಣಾನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಲು ಅರಣ್ಯ ಇಲಾಖೆ ಮುಂದಾಗಿದೆ.

ಕಳೆದ ಬಾರಿ ಗರ್ಭಿಣಿ ಆನೆಯನ್ನ ತಾಲೀಮಿಗೆ ಬಳಸಿ ಅರಣ್ಯ ಇಲಾಖೆ ಮುಜುಗರಕ್ಕೆ ಒಳಗಾಗಿತ್ತು. ಹೀಗಾಗಿ ಈ ಬಾರಿ ಎಚ್ಚೆತ್ತ ಅರಣ್ಯ ಇಲಾಖೆ ಹೆಣ್ಣಾನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಲು ಮುಂದಾಗಿದೆ.

ಆನೆ ಕ್ಯಾಂಪ್​ನಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಆದ ಬಳಿಕ ದಸರಾಗೆ ಹೆಣ್ಣಾನೆಗಳು ಆಗಮಿಸಲಿವೆ. ಕಳೆದ ಬಾರಿ ರಾಮಾಪುರ ಕ್ಯಾಂಪ್ ಆನೆ ಲಕ್ಷ್ಮೀ ಗಂಡು ಮರಿಗೆ ಜನ್ಮ ನೀಡಿತ್ತು. ಗರ್ಭಿಣಿ ಆನೆಯನ್ನ ತಾಲೀಮಿಗೆ ಬಳಸಿ ಇಲಾಖೆ ಮುಜುಗರಕ್ಕೆ ಒಳಗಾಗಿತ್ತು. ಸದ್ಯ ದಸರಾಗೆ ಆಗಮಿಸುವ ಅನೆಗಳ ಬಗ್ಗೆ ಎಚ್ಚರಿಕೆ ವಹಿಸಲಾಗುತ್ತಿದೆ.

ಈ ತಿಂಗಳಾಂತ್ಯಕ್ಕೆ ಆನೆಗಳ ಪಟ್ಟಿ ರೆಡಿಯಾಗಲಿದೆ. 14 ಆನೆಗಳನ್ನು ದಸರಾಗೆ ಕರೆತರಲು ಇಲಾಖೆ ಚಿಂತನೆ ನಡೆಸಿದೆ. ಅರ್ಜುನ ಆನೆಗೆ ವಯಸ್ಸಾದ ಕಾರಣ ಈ ಬಾರಿ ದಸರಾ ಹಬ್ಬದಿಂದ ಕೈಬಿಡಲಾಗಿದೆ. ಕ್ಯಾಂಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಈ ಬಾರಿ ದಸರಾ‌ ಜಂಬೂಸವಾರಿ ನಡೆಯಲಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ