ನಂಜನಗೂಡು : ಅಪ್ರಾಪ್ತೆಯ ಹಿಂದೆ ಬಿದ್ದು ಪ್ರೀತಿಗೆ ಒತ್ತಾಯಿಸಿ ಮದುವೆ ಆಗುವಂತೆ ಪೀಡಿಸಿ ಮಾನಸಿಕ ಕಿರುಕುಳ ನೀಡಿದ ಹಿನ್ನಲೆ ವಿಧ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಂಜನಗೂಡಿನ ನೀಲಕಂಠನಗರದಲ್ಲಿ ನಡೆದಿದೆ.
ಅಪ್ರಾಪ್ತೆ ದಿವ್ಯ(17) ಮೃತ ದುರ್ದೈವಿ. ದೇಬೂರು ಗ್ರಾಮದ ಆದಿತ್ಯ ಎಂಬ ಯುವಕನ ವಿರುದ್ದ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಂಜನಗೂಡಿನ ಸರ್ಕಾರಿ ಕಾಲೇಜಿನ ಪ್ರಥಮ ವರ್ಷದ ಪಿಯುಸಿ ಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ದಿವ್ಯ ಹಿಂದೆ ಆದಿತ್ಯ ಪ್ರೀತಿಸುವಂತೆ ದುಂಬಾಲು ಬಿದ್ದಿದ್ದಾನೆ. ಆದಿತ್ಯ ಒತ್ತಾಯವನ್ನ ದಿವ್ಯಾ ತಿರಸ್ಕರಿಸಿದ್ದಾಳೆ. ಅಲ್ಲದೆ ಆದಿತ್ಯಾ ನೀಡುತ್ತಿದ್ದ ಕಿರುಕುಳದ ಬಗ್ಗೆ ಪೋಷಕರ ಗಮನಕ್ಕೆ ತಂದಿದ್ದಾಳೆ. ಹುಡುಗನಿಗೆ ಬುದ್ದಿ ಹೇಳುವಂತೆ ತಂದೆ ಗುರುಮೂರ್ತಿ ಕೆಲವು ಹಿರಿಯರಿಗೆ ಹೇಳಿದ್ದಾರೆ. ಹೀಗಿದ್ದೂ ಆದಿತ್ಯ ತನ್ನ ವರ್ತನೆ ಬದಲಿಸಿಕೊಳ್ಳದೆ ದಿವ್ಯಾ ಹಿಂದೆ ಬಿದ್ದಿದ್ದಾನೆ. ಇದರಿಂದ ಮನ ನೊಂದ ದಿವ್ಯಾ ತನ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಆದಿತ್ಯಾ ವಿರುದ್ದ ಕ್ರಮ ಕೈಗೊಳ್ಳುವಂತೆ ಗುರುಮೂರ್ತಿ ಪ್ರಕರಣ ದಾಖಲಿಸಿದ್ದಾರೆ.





