Mysore
20
overcast clouds

Social Media

ಭಾನುವಾರ, 25 ಜನವರಿ 2026
Light
Dark

ಮುಸಲ್ಮಾನರ ಓಲೈಕೆಯೇ ರಾಜ್ಯ ಸರ್ಕಾರದ ಒನ್‌ಲೈನ್ ಅಜೆಂಡಾ: ಪ್ರತಾಪ್‌ ಸಿಂಹ

ಮೈಸೂರು: ಇಲ್ಲಿನ ಉದಯಗಿರಿ ಪೊಲೀಸ್‌ ಠಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದರೂ, ಯಾಕೆ ಆರೋಪಿಗಳನ್ನು ಬಂಧಿಸುತ್ತಿಲ್ಲ. ರಾಜ್ಯ ಸರ್ಕಾರಕ್ಕೆ ಕೇವಲ ಮುಸಲ್ಮಾನರನ್ನು ಓಲೈಕೆ ಮಾಡುವುದೇ ಒನ್‌ಲೈನ್‌ ಅಜೆಂಡಾವಾಗಿದೆ ಎಂದು ಮಾಜಿ ಸಂಸದ ಸಿಂಹ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಇಂದು(ಫೆಬ್ರವರಿ.19) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯದ ಕಾನೂನು ಸುವ್ಯವಸ್ಥೆ ಬೇಕಾಗಿಲ್ಲ. ಅವರಿಗೆ ಮುಸಲ್ಮಾನರ ಮತ ಬೇಕು ಅಷ್ಟೇ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗೆಲ್ಲಾ ನಿಷ್ಠಾವಂತ ಪೊಲೀಸ್‌ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಲ್ಲದೇ ರಾಜ್ಯ ಸರ್ಕಾರವನ್ನು ತಾಲಿಬಾನಿ ಸರ್ಕಾರಕ್ಕೆ ಹೋಲಿಸಿ ಸಿಎಂ ಸಿದ್ದರಾಮಯ್ಯ ಅದರ ಮುಖ್ಯಸ್ಥರಾಗಿದ್ದಾರೆಂದು ಆರೋಪ ಮಾಡಿದ್ದಾರೆ.

ಮುಸ್ಲಿಂರು ಬರೀ ಕೌರ್ಯ ಮಾಡುತ್ತಿದ್ದಾರೆ. ಅವರಿಗೆ ಶೌರ್ಯ ಎಂಬುದು ತಿಳಿದಿಲ್ಲ, ಹಿಂದೂಗಳ ಮೇಲೆ ಕಲ್ಲು ಹೊಡೆಯಲು ಕಾಂಗ್ರೆಸ್ ಸರ್ಕಾರ ಪುಂಡ ಮುಸ್ಲಿಂರಿಗೆ ಫ್ರೀ ಪರ್ಮಿಟ್ ನೀಡಿದೆ. ಮುಸಲ್ಮಾನರು ಪ್ರೊಟೆಕ್ಷನ್ ಕೇಳಿದರೆ ಸರ್ಕಾರ ನೀಡಲಿ ಯಾರು ಬೇಡವೆನ್ನುತ್ತಾರೆ. ಆದರೆ ಅವರು ದುಷ್ಕೃತ್ಯಗಳನ್ನು ನಡೆಸಿದಾಗ ಬಂಧಿಸಿ ದಂಡಿಸುವುದನ್ನು ಬಿಟ್ಟು ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ಅವರನ್ನು ತಡೆಯುವುದು ಹೇಗೆ? ಅವರಿಗೆ ಹೆದರಿ ಹಿಂದೂಗಳು ಮನೆ ಬಿಟ್ಟು ಬೇರೆ ಕಡೆ ಹೋಗಬೇಕೇ? ಅವರು ಹೊಗೋದಾದರೂ ಎಲ್ಲಿಗೆ ? ಎಂದು ಪ್ರಶ್ನಿಸಿದ್ದಾರೆ.

ಮುಸಲ್ಮಾನರಿಗಾದರೆ 57 ಇಸ್ಲಾಮಿಕ್ ರಾಷ್ಟ್ರಗಳಿವೆ, ಹಿಂದೂಗಳಿಗೆ ಯಾವು ದೇಶವಿದೆ? ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಹಾಗೇ ಸರ್ಕಾರ ನಡೆಸಿದರೆ ಮುಸಲ್ಮಾನರು ಹದ್ದುಬಸ್ತಿನಲ್ಲಿರುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಮುಸಲ್ಮಾನರು ತಪ್ಪು ಮಾಡಿದರೂ ಸಹ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಹೀಗಾಗಿ ಜಿ.ಪರಮೇಶ್ವರ್‌ ಅವರಿಗೆ ಗೃಹ ಸಚಿವರಾಗಿರಲು ಯಾವುದೇ ನೈತಿಕತೆ ಇಲ್ಲ. ಇನ್ನು ನಮ್ಮ ರಾಜ್ಯದಲ್ಲಿ ಬುಲ್ಡೋಜರ್‌ ಕಾನೂನು ತರಲು ಯಾರಿಗೆ ಧಮ್‌ ಇದೆ? ಯೋಗಿ ಆದಿತ್ಯನಾತ್‌ ಅವರ ರೀತಿಯಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತ ನಡೆಸಕು ಸಾಧ್ಯನಾ ಎಂದು ವಾಗ್ದಾಳಿ ನಡೆಸಿದ್ದಾರೆ.

Tags:
error: Content is protected !!