Mysore
15
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ದಕ್ಷಿಣ ಕನ್ನಡದಲ್ಲಿ ಹಿಂದೂಗಳಲ್ಲಿ ಅಭದ್ರತೆ, ಆತಂಕ ಇದೆ : ಪ್ರತಾಪ್ ಸಿಂಹ

prathap simha janivara

ಮೈಸೂರು: ದಕ್ಷಿಣ ಕನ್ನಡದಲ್ಲಿ ಹಿಂದೂಗಳಲ್ಲಿ ಅಭದ್ರತೆ, ಆತಂಕ ಇದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಕಲಡ್ಕ ಪ್ರಭಾಕರ್ ಮತ್ತು ಅರುಣ್ ಪುತ್ತಿಲ್ ಗೆ ನೋಟೀಸ್ ವಿಚಾರವಾಗಿ ಅರುಣ್ ಪುತ್ತಿಲ್, ಕಲಡ್ಕ ಪ್ರಭಾಕರ್ ಗೆ ನೋಟಿಸ್ ನೀಡಿರುವುದು ತಾಲಿಬಾನಿ ಸರ್ಕಾರ ಸ್ಥಾಪನೆಗೆ ಇಟ್ಟಿರುವ ಹೆಜ್ಜೆ ಎಂದು ಕಿಡಿಕಾರಿದರು.

ಪ್ರವೀಣ್ ನೆಟ್ಟರ್ ಹತ್ಯೆ ಆಗದದ್ದಿರೆ ಈ ಸರಣಿ ಹತ್ಯೆ ನಡೆಯುತ್ತಿದ್ವಾ? ಪ್ರವೀಣ್ ನೆಟ್ಟರ್ ಕೊಲೆ ಮಾಡಿದವರಿಗೆ ಸರಿಯಾದ ಪಾಠ ಕಲಿಸಿದ್ದರೆ ಈ ಹತ್ಯೆ ಗಳು ಆಗುತ್ತಿರಲಿಲ್ಲ. ಪಿಎಫ್ ಐ, ಕೆಎಫ್ ಡಿ ಯನ್ನು ಮಟ್ಟ ಹಾಕುವುದು ಬಿಟ್ಟು ಹಿಂದೂ ನಾಯಕರಿಗೆ ನೋಟೀಸ್ ಕೊಟ್ಟಿರುವುದು ಎಷ್ಟು ಸರಿ? ಹಿಂದೂಗಳ ಧ್ವನಿ ಅಡಗಿಸಲು ಮಾಡಿರುವ ಕೆಲಸ ಇದು ಎಂದು ವಾಗ್ದಾಳಿ ನಡೆಸಿದರು

Tags:
error: Content is protected !!