Mysore
22
broken clouds
Light
Dark

ಸಿಎಂ ಅವರ ಸ್ವಜಾತಿ ಪ್ರೇಮದಿಂದಾಗಿ ಪ್ರತಾಪ್ ಸಿಂಹಗೆ ಗೆಲುವು ಸಿಕ್ಕಿದೆ: ಪ್ರೊ.ಮಹೇಶ್ ಚಂದ್ರಗುರು

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಜಾತಿ ಪ್ರೇಮದಿಂದಾಗಿ ಪ್ರತಾಪ್ ಸಿಂಹಗೆ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಿಕ್ಕಿತ್ತು ಎಂದು ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಅವರು ಹೇಳಿದ್ದಾರೆ.

ನಗರದಲ್ಲಿ ಮಹಿಷ ದಸರಾ ಆಚರಣೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಅವರು ಮಾತಾಡಿದ ಅವರು ಸಿದ್ದರಾಮಯ್ಯರ ಸ್ವಜಾತಿ ಪ್ರೇಮದಿಂದಾಗಿ ಪ್ರತಾಪ್ ಸಿಂಹಗೆ ಗೆಲುವು ಸಿಕ್ಕಿದೆ . MP ಚುನಾವಣೆಯಲ್ಲಿ ಎಚ್.ವಿಶ್ವನಾಥ್, ಸಿ.ಎಚ್.ವಿಜಯಶಂಕರ್ ಬದಲು, ಬೇರೆ ಸಮುದಾಯದವರಿಗೆ ಟಿಕೆಟ್ ಕೊಟ್ಟಿದ್ದರೆ ಪ್ರತಾಪ್ ಸಿಂಹ ಗೆಲ್ಲುತ್ತಿರಲಿಲ್ಲ. ಅವ ದಿಕ್ಕುತಪ್ಪಿ ಗೆದ್ದ. ಒಕ್ಕಲಿಗ, ವೀರಶೈವರಿಗೆ ‘ಕೈ’ ಟಿಕೆಟ್ ಕೊಟ್ಟಿದ್ದಿದ್ರೆ ಪ್ರತಾಪ್ ಸಿಂಹ ಗೆಲ್ಲುತ್ತಿರಲಿಲ್ಲ. ಜಾತಿ ವೋಟು ತಗೊಂಡು ಅವ ಗೆದ್ದ. ನಮ್ಮವ ಅವ ಗೆದ್ದುಬಿಡಲಿ, ಕುರುಬರು ಮಾತ್ರ ಗೆಲ್ಲುವುದು ಬೇಡ ಎಂದು ನಮ್ಮ ಬೇರೆ ಮತದಾರರು ಎರಡೂ ಸಂದರ್ಭಗಳಲ್ಲಿ ನಿರ್ಣಯ ತೆಗೆದುಕೊಂಡರು ಎಂದು ಹೇಳಿದರು.

ಪ್ರತಾಪ್ ಸಿಂಹ ಕಟ್ಟರ್ ಹಿಂದುತ್ವವಾದಿ, ನಾವು ಮಾನವತಾವಾದಿಗಳು. ಮಾನವತಾವಾದಿಗಳ ಮುಂದೆ ಹಿಂದುತ್ವವಾದಿ ಪ್ರತಾಪ್ ಸಿಂಹ ಆಟ ನಡೆಯುವುದಿಲ್ಲ ಎಂದು ಹೇಳಿದರು. ಪ್ರತಾಪ್ ಸಿಂಹ ನನ್ನ ವಿದ್ಯಾರ್ಥಿ, ಆತ ತನ್ನ ತಪ್ಪನ್ನು ತಿದ್ದಿಕೊಂಡು ನಡೆಯಬೇಕು. ಸಂಸದ ಪ್ರತಾಪ್ ಸಿಂಹಗೆ ನಾನು ಕೆಡಕು ಬಯಸುವುದಿಲ್ಲ. ಒಳ್ಳೆಯದಾಗಲಿ, ಸರಿ ದಾರಿಯಲ್ಲಿ ನಡೆಯಲಿ ಎಂದು ಹಾರೈಸುತ್ತೇನೆ ಎಂದರು.

ಶೀಘ್ರದಲ್ಲೇ ಮಹಿಷ ದಸರಾ ದಿನಾಂಕ ಪ್ರಕಟ : ಇದೇವೇಳೆ ಮಹಿಷಾ ದಸರಾದ ಬಗ್ಗೆ ಮಾತನಾಡಿದ ಅವರು, ಶೀಘ್ರದಲ್ಲೇ ಮಹಿಷ ದಸರಾದ ದಿನಾಂಕ-ಸ್ಥಳದ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.

ಮಹಿಷ ದಸರಾ ಆಚರಣೆ ಸಮಿತಿ ಘೋಷಣೆ ಸಮಿತಿಯ ಪದಾಧಿಕಾರಿಯೂ ಆಗಿರುವ ಪ್ರೊ. ಮಹೇಶ್ ಚಂದ್ರಗುರು, ದಸರಾ ವಿರುದ್ಧ, ಚಾಮುಂಡಿ ವಿರುದ್ಧ ಮಹಿಷ ದಸರಾ ಮಾಡುತ್ತಿಲ್ಲ. ಮಹಿಷನ ಬಗ್ಗೆ ದೇಶದ ಉದ್ದಗಲಕ್ಕೂ ಮಾಹಿತಿ ಕಲೆ ಹಾಕುತ್ತಿದ್ದೇವೆ. ವಿಚಾರ ಸಂಕಿರಣದಲ್ಲಿ ಎಲ್ಲ ವಿಚಾರಗಳನ್ನು ಮುಂದಿಡುತ್ತೇವೆ. ನಾವು ನೀಡುವ ಮಾಹಿತಿಗಳು ಸುಳ್ಳು ಎಂದು ಸಾಬೀತಾದರೆ, ಇನ್ನೆಂದೂ ಮಹಿಷ ದಸರಾ ಆಚರಣೆ ಮಾಡುವುದಿಲ್ಲ ಅಂತ ಸವಾಲು ಹಾಕಿದರು.

ಹಿಂದುತ್ವವಾದಿಗಳು ಮಹಿಷ ದಸರಾ ಆಚರಣೆಯನ್ನು ವಿರೋಧಿಸುತ್ತಿದ್ದಾರೆ. ಸಂಘ ಪರಿವಾರದ ಸುಳ್ಳಿನ ಸರಮಾಲೆಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಮಹಿಷ ಪ್ರಾಧಿಕಾರ ರಚನೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಮಹಿಷ ಅಧ್ಯಯನ ಪೀಠ ಸ್ಥಾಪನೆಗೆ ಸರ್ಕಾರವನ್ನು ಒತ್ತಾಯಿಸುತ್ತೇವೆ. ಮೈಸೂರು, ಬೆಂಗಳೂರು ಸೇರಿ ಇತರೆ ವಿವಿಗಳಲ್ಲಿ ಪೀಠ ಸ್ಥಾಪನೆಗೆ ಒತ್ತಾಯ ಮಾಡಿದರು. ಮಹಿಷ ಬೌದ್ಧನಾಗಿದ್ದಾನೆ‌, ಹೀಗಾಗಿ ಮಹಿಷ ಬೌದ್ಧ ದಸರಾವನ್ನು ಆಚರಿಸ್ತೇವೆ. ಮಹಿಷ ದಸರಾ ವಿರೋಧಿಸುವವರಿಗೆ ತಕ್ಕ ಉತ್ತರ ಕೊಡುತ್ತೇವೆ ಎಂದು ಹೇಳಿದರು.

ಮಹಿಷ ರಾಕ್ಷಸ ಅಲ್ಲ: ಭಗವಾನ್ 
ನಿವೃತ್ತ ಪ್ರಾಧ್ಯಾಪಕ ಪ್ರೊಫೆಸರ್ ಭಗವಾನ್ ಹೇಳಿದ್ದಾರೆ. ಅಶೋಕ ಚಕ್ರವರ್ತಿ ದೇಶ ಕಂಡ ಶ್ರೇಷ್ಠ ರಾಜ. ಆತನ ಹಿರಿಮೆಯನ್ನು ಜಾತಿ ಕಾರಣಕ್ಕೆ ಸಮಾಜ ನಿರ್ಲಕ್ಷ್ಯ ಮಾಡಿದೆ. ಮಹಿಷ ರಾಕ್ಷಸ ಅಲ್ಲ, ಆತ ಬೌದ್ಧ ಭಿಕ್ಕು. ಅಶೋಕ‌ನ ಕಾಲದಲ್ಲಿ ಮಹಿಷ ಧರ್ಮ ಪ್ರಚಾರಕ್ಕಾಗಿ ಮೈಸೂರಿಗೆ ಬಂದ . ಮಹಿಷನ ಕಾಲಾನಂತರದಲ್ಲಿ ಚಾಮುಂಡಿ ಅನ್ನುವ ಪಾತ್ರ ಸೃಷ್ಟಿಸಲಾಯಿತು. ಚಾಮುಂಡಿ ಬೆಟ್ಟ ಹಿಂದೆ ಮಹಾಬಲ ಗಿರಿ ಆಗಿತ್ತು. ಜಾತಿ ಕಾರಣಕ್ಕೆ ಚಾಮುಂಡೇಶ್ವರಿಯನ್ನು ಹರಡಲಾಗುತ್ತಿದೆ. RSS ಕೇವಲ ಸುಳ್ಳು ಹೇಳುತ್ತಿದೆ ಎಂದು ಪ್ರೊಫೆಸರ್ ಕೆ ಎಸ್ ಭಗವಾನ್ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ