ಮೈಸೂರು : ಶ್ರೀನಿವಾಸ ಪ್ರಸಾದ್ ಅವರ ದೇಹ ನಮ್ಮ ಜೊತೆ ಇಲ್ಲ. ಅವರ ವ್ಯಕ್ತಿವ ಹಾಗೂ ನಡೆದುಕೊಂಡ ರೀತಿ ಮೂಲಕ ಇಂದಿಗೂ ನಮ್ಮ ಜೊತೆ ಇದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್ ಆವರಣದಲ್ಲಿ ಏರ್ಪಡಿಸಿದ್ದ ಸ್ವಾಭಿಮಾನಿಗೆ ಸಾವಿರದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀನಿವಾಸ ಪ್ರಸಾದ್ ಯಾವುದೇ ನಿಲುವು ತಾಳುವಾಗ ವಸ್ತು ನಿಷ್ಠೆಯ ಹಾದಿಯಲ್ಲಿ ಹೋಗುತ್ತಿದ್ದರೇ ಹೊರತು ಜಾತಿ ಪರವಾಗಿ ಎಂದಿಗೂ ಹೋಗುತ್ತಿರಲಿಲ್ಲ ಎಂದರು.
ಪ್ರಸಾದ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಭೂ ವ್ಯವಹಾರವಾಗಲಿ, ಡೊನೇಷನ್ ಪಡೆದ ಅಥವಾ ಚುನಾವಣೆಯಲ್ಲಿ ದುಡ್ಡಿನ ಸಹಾಯ ಪಡೆದ ಉದಾಹರಣೆಯೇ ಇಲ್ಲ ಎಂದರು.
ಶ್ರೀನಿವಾಸ ಪ್ರಸಾದ್ ಅವರ ಅಳಿಯ ಹರ್ಷ ಹಾಗೂ ನನ್ನ ನಡುವೆ ಸಣ್ಣ ಜಟಾಪಟಿಯಾಗಿದ್ದ ಸಂದರ್ಭದಲ್ಲಿ ಪ್ರಸಾದ್ ಅವರು ಯಾರ ಪರ ನಿಲ್ಲುತ್ತಾರೆ ಎಂಬುದೇ ತಿಳಿಯಲಿಲ್ಲ.
ಕೊನೆಗೂ ಇವರಿಬ್ಬರು ಸಹೋದರರಿದ್ದಂತೆ ಅವರೆ ಜಗಳವನ್ನು ಸರಿ ಮಾಡಿಕೊಳ್ಳುತ್ತಾರೆ ಎಂದು ತಟಸ್ಥರಾಗಿದ್ದರು. ಯಾವುದೇ ವಿಚಾರವಾಗಲಿ ನಿಲುವು ತಾಳದೇ ಬಿಟ್ಟುಬಿಡುತ್ತಿದ್ದರು.ಈ ಮೂಲಕ ಎಲ್ಲರ ಪ್ರೀತಿ ವಿಶ್ವಾಸವನ್ನು ಪಡೆದ ವ್ಯಕ್ತಿ ಶ್ರೀನಿವಾಸ ಪ್ರಸಾದ್ ಎಂದು ಹೇಳಿದರು.