Mysore
28
few clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಮೈಸೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಮೈಸೂರು: ನಗರದ ಕೆಲವೆಡೆ ವಿದ್ಯುತ್ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಸೆಸ್ಕಾಂ ತಿಳಿಸಿದೆ.

ಜೂ.02 ರಂದು ಬೆಳಿಗ್ಗೆ 10 ಗಂಟೆಯಿoದ ಸಂಜೆ 5:30 ಗಂಟೆಯವರೆಗೆ ಕಡಕೊಳ ವಿದ್ಯುತ್ ಸ್ವೀಕರಣಾ ಕೇಂದ್ರ ಮತ್ತು ಎಫ್.ಟಿ.ಎಸ್ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಕ.ವಿ.ಪ್ರ.ನಿ.ನಿ. ವತಿಯಿಂದ 1ನೇ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದ್ದು, ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಕಡಕೊಳ ವಿ.ವಿ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿರುವ ಮುಖ್ಯ ಪ್ರದೇಶಗಳು: ಕಡಕೊಳ, ಬ್ಯಾತಹಳ್ಳಿ, ದಡದಹಳ್ಳಿ, ಸಿಂಧುವಳ್ಳಿ, ದೊಡ್ಡಕಾನ್ಯ, ಚಿಕ್ಕ ಕಾನ್ಯ, ಕೂಡನಹಳ್ಳಿ, ಕೋಚನಹಳ್ಳಿ, ಮರಸೆ, ಮಾಕನಹುಂಡಿ, ಕೆ.ಐ.ಎ.ಡಿ.ಬಿ ಇಂಡಸ್ಟ್ರಿಯಲ್ ಏರಿಯಾ, ವಿಮಾನ ನಿಲ್ದಾಣ, ಬಿರೇಗೌಡನಹುಂಡಿ, ಕೆ.ಎಂ. ಹುಂಡಿ, ಬಿ.ಜಿ. ಹುಂಡಿ, ಕೆ.ಎನ್. ಹುಂಡಿ, ಆಯರಹಳ್ಳಿ, ಕಿರಾಳು, ದೂರ, ಮುರುಡಗಳ್ಳಿ, ತಳೂರು, ಡಿ. ಕಾಟೂರು, ಟಿ.ವಿ.ಎಸ್. ಫ್ಯಾಕ್ಟರಿ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು.

ಎಫ್.ಟಿ.ಎಸ್ ವಿ.ವಿ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿರುವ ಮುಖ್ಯ ಪ್ರದೇಶಗಳು: ಸುಭಾಷ್‌ನಗರ, ಕೆಸರೆ 1ನೇ, 2ನೇ ಹಾಗೂ 3ನೇ ಹಂತ, ನ.ರಾ ಮೊಹಲ್ಲಾ, ಗಾಂಧಿನಗರ, ಮೊಹಮ್ಮದ್ ಸೇಠ್ ಬ್ಲಾಕ್, ವೀರನಗೆರೆ, ಉದಯಗಿರಿ, ಬನ್ನಿಮಂಟಪ, ನೆಲ್ಸನ್ ಮಂಡೇಲಾ ರಸ್ತೆ, ಎಲ್.ಐ.ಸಿ, ಹೈವೆ ವೃತ್ತ, ತಿಲಕ್‌ನಗರ, ಉಮ್ಮರ್ ಖಾಯಂ ರಸ್ತೆ, ನ್ಯೂ ಸಯ್ಯಾಜಿ ರಾವ್ ರಸ್ತೆ, ರಾಜೇಂದ್ರನಗರ, ಮೇದರ್ ಬ್ಲಾಕ್, ಬಂಬೂ ಬಜಾರ್, ಲಯನ್ಸ್ ಕ್ಲಬ್, ಫರೂಕೀ ಡೆಂಟಲ್ ಕಾಲೇಜು, ಜೈಲ್ ವಸತಿ ಗೃಹ, ಐ.ಟಿ.ಐ ಕಾಲೇಜು, ಭಾವನಾ ಮಾರ್ಬಲ್ ರಸ್ತೆ, ‘ಎ’ ಬಡಾವಣೆ, ಬಿ.ಬಿ ಕೇರಿ, ಬಿ.ಟಿ ಮಿಲ್ ರಸ್ತೆ, ಈದ್ಗ ಮೈದಾನ, ಕಬೀರ್ ಮಠ, ಆನೆಗುಂದಿ ರಸ್ತೆ, ಹನುಮಂತನಗರ, ಕೆ.ಎಸ್.ಆರ್.ಟಿ.ಸಿ, ಎಸ್.ಎಸ್ ನಗರ, ಕಾವೇರಿ ನಗರ, ಸಿದ್ದಿಖಿ ನಗರ, ಬನ್ನಿಮಂಟಪ ‘ಸಿ’ ಬಡಾವಣೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಹಾಗೂ ಕೈಗಾರಿಕೋಧ್ಯಮಿಗಳು ಸಹಕರಿಸಬೇಕೆಂದು ನ.ರಾ.ಮೊಹಲ್ಲಾ ವಿಭಾಗದ ಕಾರ್ಯ ಮತ್ತು ಪಾಲನೆಯ ಕಾರ್ಯನಿರ್ವಾಹಕ ಇಂಜಿನಿಯರ್(ವಿ)  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags: