Mysore
22
few clouds

Social Media

ಗುರುವಾರ, 10 ಏಪ್ರಿಲ 2025
Light
Dark

ಬಿದ್ದಿದ್ದ ಮರಕ್ಕೆ ಬೈಕ್‌ ಡಿಕ್ಕಿ ಪೊಲೀಸ್‌ ನೌಕರ ಸಾವು

ಹುಣಸೂರು: ಸ್ನೇಹಿತನ ಮದುವೆಯ ಚಪ್ಪರದ ಊಟಕ್ಕೆ ಹೋಗಿ ವಾಪಸ್‌ ಬರುವಾಗ ಕೆಳಗೆ ಬಿದ್ದಿದ್ದ ಮರಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸಾಗರ್.ಕೆ (31) ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ವಾಸು ಸಣ್ಣಪುಟ್ಟ ಗಾಯಗಳಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ನಿವಾಸಿ ಸೀಮೆಣ್ಣೆ ಕುಳ್ಳಯ್ಯ ನವರ ಮಗ ಸಾಗರ್.ಕೆ ಪೊಲೀಸ್ ಇಲಾಖೆಯಲ್ಲಿ ನೌಕರನಾಗಿದ್ದು, ಕೋರಮಂಗಲ ಸ್ಟೇಷನ್‌ನಲ್ಲಿ ಕರ್ತವ್ಯ ನಿರ್ವಹಿಸಿತ್ತಿದ್ದರು.

ಗುರುವಾರ ತನ್ನ ಸ್ನೇಹಿತ ಸುನೀಲ್‌ ಮಾಕೋಡು ಮದುವೆ ಇದ್ದ ಹಿನ್ನಲೆ ಸ್ನೇಹಿತರೆಲ್ಲರೂ ಬುಧವಾರ ರಾತ್ರಿ ಅರತಕ್ಷತೆಗೆ ಹೋಗಿ ಬರುವ ಸಮಯದಲ್ಲಿ ಚಿಟ್ಟಕ್ಯಾತನಹಳ್ಳಿ ಪಕ್ಕ ಕೆಳಗೆ ಬಿದ್ದಿದ್ದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಾಗರ್‌.ಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

 

 

Tags: