ಮೈಸೂರು: ಮುಸ್ಲಿಂ ಧರ್ಮದ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್ ಹರಿಬಿಟ್ಟ ಪ್ರಕರಣದ ಆರೋಪಿ ಸತೀಶ್ ಗಡಿಪಾರು ಪ್ರಕ್ರಿಯೆಗೆ ನ್ಯಾಯಾಲಯವು ನೀಡಿದ ತಡೆಯಾಜ್ಞೆ ತೆರವುಗೊಳಿಸುವಂತೆ ಪೊಲೀಸರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಪರಿಷ್ಕರಣಾ ಅರ್ಜಿ ಸಲ್ಲಿಸಿದ್ದಾರೆ.
ಆರೋಪಿ ಪರ ವಕೀಲ ಅ.ಮ.ಭಾಸ್ಕರ್ ತಡೆಯಾಜ್ಞೆ ತೆರವಿಗೆ ಆಕ್ಷೇಪಿಸಿದರು. ಆರೋಪಿ ಸತೀಶ್ ವಿರುದ್ಧ ಪೊಲೀಸರು ಹೊರಡಿಸಿರುವ ಗಡಿಪಾರು ಆದೇಶ ಕಾನೂನು ಬಾಹಿರ ಎಂಬುದನ್ನು ಪುನರುಚ್ಚರಿಸಿದರು. ಈ ಆದೇಶ ಹೊರಡಿಸುವ ಮುನ್ನ ಯಾವುದೇ ನಿಯಮವನ್ನು ಪಾಲಿಸಿಲ್ಲ. ಆರೋಪಿಯ ಆರೋಪದ ಬಗ್ಗೆ ಉಲ್ಲೇಖವಿಲ್ಲ, ತನಿಖಾ ವರದಿಯೂ ಇಲ್ಲ. ಆರೋಪಿ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. ಇಷ್ಟಾದರೂ ಯಾವ ಕಾರಣಕ್ಕಾಗಿ ಗಡಿಪಾರು ನೋಟಿಸ್ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಪಟ್ಟು ಹಿಡಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಮಾ.15ಕ್ಕೆ ತೀರ್ಪು ಕಾಯ್ದಿರಿಸಿ ವಿಚಾರಣೆ ಮುಂದೂಡಿದರು.





