ಮೈಸೂರು: ಲಂಚ ಸ್ವೀಕರಿಸುವಾಗ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಗರದ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕುವೆಂಪುನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಾಧಾ ಎಂಬುವವರೇ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿರುವವರಾಗಿದ್ದಾರೆ.
ಕ್ರಿಮಿನಲ್ ಕೇಸ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕುವೆಂಪು ನಗರ ವ್ಯಕ್ತಿಯಿಂದ 25 ಸಾವಿರ ರೂ ಹಣ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳ ನಡೆಸಿದ್ದಾರೆ. ಆ ದಾಳಿಯ ವೇಳೆ ರಾಧಾ ಎಂಬುವವರನ್ನು ಬಂಧಿಸಿದ್ದಾರೆ.
ಕ್ರಿಮಿನಲ್ ಪ್ರಕರಣ ಸಂಬಂಧ ಸ್ಥಳೀಯ ವ್ಯಕ್ತಿಗೆ 50 ಸಾವಿರ ರೂ.ಗಳ ಬೇಡಿಕೆಯಟ್ಟಿದ್ದರು. ಇದರಿಂದ ಬೇಸರಗೊಂಡಿದ್ದ ವ್ಯಕ್ತಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ರಾಧಾ ಅವರಿಗೆ 25 ಸಾವಿರ ಹಣ ನೀಡುವಾಗ, ಮೈಸೂರು ಲೋಕಾಯುಕ್ತ ಎಸ್.ಪಿ ಮೋಹನ್ ಕುಮಾರ್, ಚಾಮರಾಜನಗರ ಲೋಕಾಯುಕ್ತ ಜಂಟಿ ಕಾರ್ಯಾಚರಣೆ ಮಾಡಿ ಸಬ್ಇನ್ಸ್‌ಪೆಕ್ಟರ್ ರಾಧಾ ಅವರನ್ನು ಬಂಧಿಸಿದ್ದಾರೆ.