Mysore
22
clear sky

Social Media

ಶುಕ್ರವಾರ, 27 ಮಾರ್ಚ್ 2026
Light
Dark

ಮೈಸೂರಿನ ಗುಜರಿ ಅಂಗಡಿಯಲ್ಲಿ ವಿಷಾನಿಲ ಸೋರಿಕೆ: 20ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

ಮೈಸೂರು: ವಿಷಕಾರಿ ಅನಿಲ ಸೋರಿಕೆಯಿಂದಾಗಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ತರಾಗಿರುವ ಘಟನೆ ಮೈಸೂರಿನ ಹಳೆ ಕೆಸೆರೆ ಬಳಿ ನಡೆದಿದೆ.

ನಗರದ ಹಳೆ ಕೆಸರೆ ಬಳಿಯಿರುವ ಗುಜರಿ ಅಂಗಡಿಯಲ್ಲಿ ಅನಿಲ ಸೋರಿಕೆ ಉಂಟಾಗಿದ್ದು, ಕೆಲಕಾಲ ಆತಂಕದ ಸ್ಥಿತಿ ನಿರ್ವಾಣವಾಗಿತ್ತು. ನೀರು ಶುದ್ಧೀಕರಣ ಘಟಕಗಳಿಗೆ ಬಳಸುವ ಅನಿಲ ಸಿಲಿಂಡರ್‌ಗಳ ಸೋರಿಕೆಯಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಅನಿಲ ಸೋರಿಕೆಯಿಂದ ಉಸಿರಾಟದ ತೊಂದರೆ ಇತರ ಘಟನೆಗಳು ಸಂಭವಿಸಿವೆ. ಕೂಡಲೇ ಅವರನ್ನು ಕೆಆರ್ ಆಸ್ಪತ್ರೆ, ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಘಟನಾ ಸ್ಥಳಕ್ಕಾಗಮಿಸಿದ ಎನ್‌ಆರ್ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Tags:
error: Content is protected !!